ಕೊಪ್ಪಳ: ’ಮಕ್ಕಳಿಗೆ ಬಾಲ್ಯದಲ್ಲಿದ್ದಾಗಲೇ ಉತ್ತಮ ಸಂಸ್ಕಾರ ಕೊಡಿಸಿದರೆ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಶಿಬಿರಗಳಿಂದ ಮಕ್ಕಳಲ್ಲಿನ ಸೃಜನಶೀಲತೆ ಬೆಳೆಯುತ್ತದೆ’ ಎಂದು ಹಾಸ್ಯ ಭಾಷಣಕಾರ ಬಿ. ಪ್ರಾಣೇಶ ಹೇಳಿದರು.

ಇಲ್ಲಿನ ಕಿನ್ನಾಳ ರಸ್ತೆಯಲ್ಲಿರುವ ವಿಠ್ಠಲಕೃಷ್ಣ ವಾಣಿಜ್ಯ ಸಂಕೀರ್ಣದಲ್ಲಿ ಸಮಾನ ಮನಸ್ಕರು ಸೇರಿ ಆಯೋಜಿಸಿದ್ದ ವಸಂತ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪದಲ್ಲಿ ಇತ್ತೀಚೆಗೆ ಮಾತನಾಡಿದ ಅವರು ‘ಮಕ್ಕಳಲ್ಲಿನ ಜ್ಞಾನ ಹೆಚ್ಚಿಸಲು ಶತವಾಧಾನ, ಅಷ್ಟಾವಧಾನ ಶಿಬಿರ ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಮಾಡಿದಂತೆ ಯುವಕರಿಗೂ ಶಿಬಿರ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಹಾಸ್ಯದ ಮೂಲಕವೂ ಮಕ್ಕಳಲ್ಲಿ ಧರ್ಮದ ಜಾಗೃತಿ ಮೂಡಿಸಬೇಕು ಎಂದರು.

18 ದಿನಗಳ ಕಾಲ ನಡೆದ ಶಿಬಿರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದರು. ಬಳಿಕ ಶಿಬಿರಾರ್ಥಿಗಳು ಹಾಗೂ ಅವರ ಪೋಷಕರು ತಮ್ಮ ಅನಿಸಿಕೆ ಹಂಚಿಕೊಂಡರು.

ಇಲ್ಲಿನ ರಾಯರ ಮಠದ ಪ್ರಧಾನ ಅರ್ಚಕ ರಘುಪ್ರೇಮಾಚಾರ್ಯ ಮುಳಗುಂದ, ಬೆಂಗಳೂರು ವಿದ್ಯಾಪೀಠದ ಯದುನದನಾಚಾರ್ಯ, ವಿಠ್ಠಲಕೃಷ್ಣ ದೇವಸ್ಥಾನದ ಮಾಜಿ ಕಾರ್ಯದರ್ಶಿ ರಮೇಶ ಹುನಗುಂದ, ಮಾಜಿ ಅಧ್ಯಕ್ಷ ರಮೇಶ ಜಹಗೀರದಾರ, ಕಾರ್ಯದರ್ಶಿ ರಾಜೇಂದ್ರಚಾರ್ಯ ಬಿಸರಳ್ಳಿ, ಗೋವಿಂದಭಟ್ಟ ಕಣವಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಗುರುರಾಜ ಜೋಶಿ, ಶಂಕರ ಸೇವಾ ಸಮಿತಿಯ ಅಧ್ಯಕ್ಷ ಡಿ.ವಿ. ಜೋಶಿ, ವೇಣುಗೋಪಾಲಚಾರ್ ಜಹಗೀರದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-35-1252205461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.