ಕೊಪ್ಪಳ: ‘ಐದು ಸಾವಿರ ಮಕ್ಕಳು ಓದಲು ಹಾಸ್ಟೆಲ್ ಮತ್ತು ಬಾಲಕಿಯರ ಪದವಿಪೂರ್ವ ವಸತಿ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಅನೇಕ ಭಕ್ತರು ಕೊಡುಗೆ ನೀಡಿದ್ದಾರೆ. ಎಲ್ಲವನ್ನು ಕೊಟ್ಟೂ ಎಲೆಮರೆಯ ಕಾಯಿಯಂತೆ ಇರುವ ಪ್ರತಿಭಕ್ತರಿಗೂ ಇದರ ಶ್ರೇಯ ಸಲ್ಲಬೇಕು, ಗವಿಮಠಕ್ಕೆ ನೀಡಿದ ಪ್ರತಿ ದಾನವೂ ಮರಳಿ ಭಕ್ತನಿಗೆ ಸಮರ್ಪಣೆಯಾಗುತ್ತದೆ’ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕೋಳೂರು-ಕಾಟ್ರಳ್ಳಿ ಬಳಿ ನಿರ್ಮಾಣವಾಗಿರುವ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿಪೂರ್ವ ವಸತಿ ಕಾಲೇಜಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಸ್ವಾಮೀಜಿ, ‘ಎಲ್ಲರೂ ಎಂಜಿನಿಯರ್, ಡಾಕ್ಟರ್, ಐಎಎಸ್ ಅಧಿಕಾರಿಯಾಗಬೇಕು ಎಂದು ಬಯಸುತ್ತಿದ್ದಾರೆ. ಎಲ್ಲರೂ ಹೀಗೆ ಕನಸುಗಳನ್ನು ಕಾಣುತ್ತ ಹೋದರೆ ಸ್ವಾಮೀಜಿಗಳಾಗಿ ಮಠಗಳನ್ನು ನಡೆಸುವವರು ಯಾರು’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಶಿಕ್ಷಣ, ವಸತಿ ಹಾಗೂ ಅನ್ನದ ವಿಚಾರದಲ್ಲಿ ಮರಿಶಾಂತವೀರ ಹಾಗೂ ಶಿವಶಾಂತವೀರ ಸ್ವಾಮೀಜಿಗಳ ಪರಂಪರೆ ಮುಂದುವರಿಸಿಕೊಂಡು ಬರಲಾಗಿದೆ. ಕೊಪ್ಪಳದ ಜನ ಹೃದಯವಂತರಾಗಿದ್ದು, ತಮ್ಮ ಮಕ್ಕಳಿಗಿಂತಲೂ ಹೆಚ್ಚು ನನಗೆ ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಅಪೂರ್ಣವಾಗಿದ್ದ ಐದು ಸಾವಿರ ಮಕ್ಕಳ ಹಾಸ್ಟೆಲ್ ಕಟ್ಟಡ ಪೂರ್ಣಗೊಳಿಸುವುದಷ್ಟೇ ಗುರಿಯಾಗಿತ್ತು. ಉದಾರವಾಗಿ ಭಕ್ತರಿಂದ ಬಂದ ದಾನದಿಂದಾಗಿ ಮಹಿಳಾ ವಸತಿ ಕಾಲೇಜು ಕಟ್ಟಲು ಸಾಧ್ಯವಾಯಿತು’ ಎಂದು ಹೇಳಿದರು.

‘ಸಂಪೂರ್ಣವಾಗಿ ನಾನೇ ಹಾಸ್ಟೆಲ್ ನಡೆಸಬೇಕು ಎನ್ನುವುದೇನೂ ಇಲ್ಲ, ಭಕ್ತರು ಕೈಹಿಡಿದಷ್ಟು ದಿನ ನಡೆಸಿಕೊಂಡು ಹೋಗುವೆ. ಮುಂದೆ ಯಾರು ನಡೆಸಿಕೊಂಡು ಹೋಗುತ್ತಾರೆಯೊ ಅವರ ಕೈಗೆ ಕೊಟ್ಟು ಹೋಗುವೆ’ ಎಂದರು.

ಮುಂಡರಗಿ ಸಂಸ್ಥಾನ ಮಠದ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ‘ಮುಂಡರಗಿ ಹಾಗೂ ಗವಿಸಿದ್ಧೇಶ್ವರ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಹೆಣ್ಣುಮಕ್ಕಳು ಸುಂದರ ಭವಿಷ್ಯ ರೂಪಿಸಿ ಕೊಳ್ಳಲು ಗುರುಕುಲ ವೇದಿಕೆಯಾಗುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು, ಕುಷ್ಟಗಿ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ನಿಡಶೇಷಿ- ಗೆಜ್ಜಿಭಾವಿ ಕುಷ್ಟಗಿ ಹಿರೇಮಠದ ಕರಿಬಸವ ಸ್ವಾಮೀಜಿ, ಅಭಿನವ ಬೂದೀಶ್ವರ ಸ್ವಾಮೀಜಿ, ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಬಿಜಕಲ್ನ ಶಿವಲಿಂಗ ಸ್ವಾಮೀಜಿ, ಹಿರೇಸಿಂಧೋಗಿ ಕಪ್ಪತ್ತಮಠದ ಚಿದಾನಂದ ಸ್ವಾಮೀಜಿ, ದದೇಗಲ್ ಸಿದ್ಧಾರೂಢ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ, ಬಳಗಾನೂರು ಶರಣರ ಮಠದ ಶಿವಶಾಂತವೀರ ಸ್ವಾಮೀಜಿ, ಭಾಗ್ಯನಗರದ ಶಂಕರಾಚಾರ್ಯರ ಮಠದ ಶಿವಪ್ರಕಾಶ ನಂದ ಸ್ವಾಮೀಜಿ, ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರೀಗಳು, ಮಾಜಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡ್ಡಾದ, ಉದ್ಯಮಿಗಳಾದ ಶ್ರೀನಿವಾಸ ಗುಪ್ತಾ, ಶಂಕರಣ್ಣ ಮುನವಳ್ಳಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಹಾಲಪ್ಪ ಆಚಾರ್, ವಿಧಾನಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-35-1826377029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.