ಕೊಪ್ಪಳ: ‘ಒಳ ಎಂದರೆ ಅಂತರಂಗ, ಮನದ ಆಲೋಚನೆ. ಹೊರ ಎಂದರೆ ಬಹಿರಂಗ, ತನುವಿನ ಕ್ರಿಯೆ. ಆಲೋಚನೆಯಂತೆ ಆಚಾರ ಅಥವಾ ಆಚಾರದಂತೆ ಆಲೋಚನೆ ಇಲ್ಲದಿದ್ದರೆ ಜೀವನ ಪಥದಲ್ಲಿ ಅವಘಡ ನಿಶ್ಚಿತ’ ಎಂದು ಬೀದರ್ನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಶುಕ್ರವಾರ ರಾತ್ರಿ ಒಳ ಹೊರಗೊಂದಾಗಿರುವ ಭಾಷೆ ಕುರಿತು ಮಾತನಾಡಿದ ಅವರು ‘ಬಸವಣ್ಣನವರು ಅಂತರಂಗ ಬಹಿರಂಗ ಎರಡರ ಶುದ್ಧಿಗೂ ಸಮಾನ ಪ್ರಾಮುಖ್ಯತೆ ನೀಡಿರುವರು. ಎರಡರ ಶುದ್ಧಿಯಿಂದ ಮಾತ್ರ ಪರಮೋಚ್ಚ ದೇವನ ಸಾಧನೆ ಸಾಧ್ಯ. ದೈಹಿಕ ಕ್ರಿಯೆಗಳು ಮತ್ತು ಮನದ ಯೋಜನೆಗಳು, ಮನದ ಕೋಣೆಯಲ್ಲಿಯೇ ರೂಪುಗೊಳ್ಳುತ್ತವೆ. ಯೋಜನೆಗಳನ್ನು ಕ್ರಿಯಾಶೀಲಗೊಳಿಸುವ ಸಾಧನವೇ ದೇಹ. ದೇಹ ಮತ್ತು ಮನ ಇವೆರಡೂ ಒಂದಾದಾಗ ಮಹತ್ಸಾಧನೆಯ ಸಿದ್ಧಿಯಾಗುತ್ತದೆ’ ಎಂದರು.

ಮಕ್ಕಳಿಗಾಗಿ ಶರಣಸಂಸ್ಕೃತಿ ಕಾರ್ಯಾಗಾರ ನಡೆಯಿತು. ಸ್ವಾಮೀಜಿ, ಯೋಗ ಗುರು ಲೋಕೇಶ, ಶರಣೆ ಅರ್ಚನಾ ಸಸಿಮಠ ಹಾಗೂ ಡಾ. ಸಂಗಮೇಶ ಕಲಹಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಂದ ಭಕ್ತರಿಗೆ ಸಂಘಟಕರೇ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-35-2279139

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.