ಕೊಪ್ಪಳ: ‘ಭಕ್ತರ ಭಕ್ತಿಯ ಪ್ರತೀಕವಾದ ಶ್ರೀಶೈಲ ಮಲ್ಲಿಕಾರ್ಜುನನ ಪಾದಯಾತ್ರೆ ಪ್ರತಿ ಮನುಷ್ಯನಲ್ಲಿಯೂ ಹೊಸ ಹುಮ್ಮಸ್ಸು ಮೂಡಿಸುತ್ತದೆ. ಬದುಕಿನಲ್ಲಿ ಸರ್ವ ಸಮರ್ಪಣೆ ಕಲಿಸುವ ಶಕ್ತಿಯನ್ನು ನಡಿಗೆ ಒಳಗೊಂಡಿದೆ’ ಎಂದು ಆಂಧ್ರದ ಶ್ರೀಶೈಲ ಮಹಾಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಇಲ್ಲಿನ ಶ್ರೀಶೈಲ ಕ್ಷೇತ್ರದರ್ಶನ ಯಾತ್ರಾ ಬಳಗದ ಬೆಳ್ಳಿ ಮಹೋತ್ಸವದ ಅಂಗವಾಗಿ ಭಾನುವಾರ ನಗರದ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ರೇಣುಕಾಚಾರ್ಯ ಮಂದಿರದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ‘ಪರಂಪರಾಗತವಾಗಿ ಶ್ರೀಶೈಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬರುತ್ತಿದ್ದರು. ಈಗಿನ ಕಾಲದಲ್ಲಿ ಸಾಕಷ್ಟು ಸಾರಿಗೆ ಸೌಲಭ್ಯಗಳಿದ್ದರೂ ಭಕ್ತರು ಪಾದಯಾತ್ರೆಯ ಮೂಲಕವೇ ಕ್ಷೇತ್ರಕ್ಕೆ ಬರುತ್ತಾರೆ. ಇದು ಅವರ ಭಕ್ತಿ ತೋರಿಸುತ್ತದೆ’ ಎಂದರು.

‘ಯುಗಾದಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಅನೇಕ ಭಾಗಗಳಿಂದ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಬರುವುದು ಒಂದೆಡೆಯಾದರೆ, ಅವರಿಗೆ ಸೇವೆ ಮಾಡುವವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಪಾದಯಾತ್ರೆ ಮೂಲಕ ಬರುವುದೇ ಭಕ್ತರ ಭಕ್ತಿ. ಅನೇಕರು ತಾಯಿಯನ್ನು ಹೊತ್ತು ಪಾದಯಾತ್ರೆ ಮಾಡಿದ ಉದಾಹರಣೆಗಳೂ ಇವೆ. ಇದಕ್ಕೆಲ್ಲ ಮಲ್ಲಯ್ಯನ ಮೇಲೆ ಜನ ಇಟ್ಟ ಭಕ್ತಿಯೇ ಕಾರಣ. ಯುಗಾದಿ ಸಂದರ್ಭದಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬಂದಾಗ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇರುವುದಿಲ್ಲ. ಭಕ್ತರ ನಡುವೆ ಇರುತ್ತಾನೆ’ ಎಂದು ವಿಶ್ಲೇಷಿಸಿದರು.

ಯಾತ್ರಾ ಬಳಗದ ಸಂಚಾಲಕ ಜಗದೀಶ್ ಎಲ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ‘ಅತ್ಯಂತ ಕಷ್ಟದ ಸಮಯದಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆ ಆರಂಭಿಸಿದೆವು. ಆ ಕ್ಷೇತ್ರದ ಮಣ್ಣಿನಲ್ಲಿ ಧರ್ಮದ ಗುಣವಿದೆ. ಅಲ್ಲಿಗೆ ಹೋಗಿಬಂದರೆ ಎಲ್ಲ ಕಷ್ಟಗಳು ಕಳೆಯುತ್ತವೆ. ಪಾತಾಳಗಂಗೆ ನಮ್ಮ ಮಲೀನತೆ ತೊಳೆಯುತ್ತಾಳೆ. ನಿಷ್ಠೆಯಿಂದ ಕರ್ತವ್ಯ ಮಾಡುತ್ತ ಹೋದರೆ ಗುರು ಒಲಿಯುತ್ತಾರೆ’ ಎಂದರು.

ಇಟಗಿಯ ಗುರುಶಾಂತವೀರ ಸ್ವಾಮೀಜಿ, ಅಳವಂಡಿಯ ಸಂಸ್ಥಾನ ಕಟ್ಟೀಮನಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು, ಕಂಪಸಾಗರದ ಹಿರೇಮಠದ ಅಭಿನವ ನಾಗಭೂಷಣ ಶಿವಾಚಾರ್ಯರು, ಯಾತ್ರಾ ಬಳಗದ ಪ್ರಮುಖರಾದ ಹಂಪಯ್ಯ ಬನ್ನಿಮಠ, ಶಿವಶಾಂತವೀರಸ್ವಾಮಿ ಹಿರೇಮಠ, ರುದ್ರೇಶ ಮಾದಿನೂರು, ಮಂಜುನಾಥ ಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬೆಳ್ಳಿ ಮಹೋತ್ಸವ ಅಂಗವಾಗಿ ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ, ಮಲ್ಲಿಕಾರ್ಜುನ ಸ್ವಾಮಿಯ ಮಹಾಪರ್ವ ಪೂಜೆ, ಶಿವಶಕ್ತಿ ಧ್ಯಾನ ಭಜನೆ, ವಿಶೇಷ ಸಂಗೀತ ಕಾರ್ಯಕ್ರಮ, ತುಲಾಭಾರ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-35-844515080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.