ಯಲಬುರ್ಗಾ: ‘ಶರಣ ಸಂಸ್ಕೃತಿಯ ಬಗ್ಗೆ ಒಲವು ತೋರುವುದು ಹಾಗೂ ಶರಣರ ವಚನಗಳನ್ನು ಅಧ್ಯಯನ ಮಾಡಿ ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸುವಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ವಚನಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ’ ಎಂದು ಕೊಪ್ಪಳದ ಗುರುಬಸವ ಮಹಾಮನೆಯ ಶರಣೆ ಮಾತೋಶ್ರೀ ಅರ್ಚನಾ ಹೇಳಿದರು.

ತಾಲ್ಲೂಕಿನ ವಣಗೇರಿ ಗ್ರಾಮದ ಬಸವ ಯೋಗಾಶ್ರಮದಲ್ಲಿ ಆಯೋಜಿಸಿದ್ದ 8ನೇ ವಚನ ದರ್ಶನ ಚಿಂತನ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವಚನಗಳಲ್ಲಿನ ತತ್ವಗಳು, ಸಿದ್ಧಾಂತಗಳು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವುದಲ್ಲದೆ ಉತ್ತಮ ಜೀವನಕ್ಕೆ ದಿಕ್ಸೂಚಿಗಳಾಗಿವೆ’ ಎಂದರು.

ಮಕ್ಕಳ್ಳಿಯ ಶಿವಾನಂದಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಶಿವಾನುಭವ ಕಾರ್ಯಕ್ರಮಗಳು ಜ್ಞಾನದ ಜ್ಯೋತಿ ಬೆಳಗಿಸುತ್ತವೆ. ಶರಣ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ’ ಎಂದು ಹೇಳಿದರು.

ಲೇಬಗೇರಿಯ ಮಹಾನೇಗುಂದಿ ಸರಸ್ವತಿ ಸಂಸ್ಥಾನ ವಿಶ್ವಕರ್ಮ ಪೀಠದ ಶಿವುಕುಮಾರ ಸ್ವಾಮೀಜಿ ಮಾತನಾಡಿ, ‘ಜನರಲ್ಲಿ ಶರಣ ಚಿಂತನೆ, ಆದರ್ಶಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ವಚನ ದರ್ಶನ ಚಿಂತನ ಕಾರ್ಯಕ್ರಮದಲ್ಲಿ ನಡೆಯುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಮುಖ್ಯಶಿಕ್ಷಕ ಬಸವರಾಜ ಮಾಸ್ತಿ, ಅಶೋಕ ಮಾಲಿಪಾಟೀಲ, ವಿ.ಎಸ್. ಬೆಣಕಲ್ ಮಾತನಾಡಿದರು.

ಇದೇ ವೇಳೆ ಯಲಬುರ್ಗಾ, ಕುಕನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಸವ ಯೋಗಾಶ್ರಮದ ಯಶವಂತ ಶರಣರು ಸಾನ್ನಿಧ್ಯ ವಹಿಸಿದ್ದರು.

ಬೆಂಗಳೂರಿನ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ ಸಂಗಮೇಶ ತೆಗ್ಗಿನಮನಿ, ಸುನೀಲ ದೇಸಾಯಿ, ಮಲ್ಲಿಕಾರ್ಜುನ, ಕಳಕೇಶ ಬಳಿಗಾರ, ಶರಣಪ್ಪ ಕರಿಗಾರ, ಶಿವಪ್ಪ ಮೇಟಿ, ಮುದಿಯಪ್ಪ ಮೇಟಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-511737481

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.