ಕೊಪ್ಪಳ: ‘ಸಮಾಜದ ಹಿತದೃಷ್ಟಿಯಿಂದ ಹಾಗೂ ಮಹಿಳೆಯರ ಗೌರವದ ದೃಷ್ಟಿಯಿಂದ ಬಸವಣ್ಣನವರ ಪರವಧುವನು ಮಹಾದೇವಿಯೆಂಬ ಭಾಷೆ ಬಹು ಮಹತ್ವದ್ದು. 12ನೇ ಶತಮಾನದಲ್ಲಿ ಸಮಾಜದ ಅರ್ಧಭಾಗವಾದ ಮಹಿಳೆಯರನ್ನು ಸೂಕ್ತವಾಗಿ ಗೌರವಿಸಿ ಮುಖ್ಯವಾಹಿನಿಗೆ ತರುವುದು ಈ ಭಾಷೆಯಿಂದ ಸಾಧ್ಯವಾಯಿತು’ ಎಂದು ಬೀದರ್ನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಮಾತನಾಡಿದ ಅವರು ‘ಆದಿಕಾಲದಿಂದಲೂ ಸ್ತ್ರೀಯರನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿವೆ. ತತ್ಪಲವಾಗಿಯೇ ಆಕೆ ವಿದ್ಯೆ, ಅಧಿಕಾರ, ಸ್ವತಂತ್ರತೆ, ಸಮಾನತೆಗಳಿಂದ ವಂಚಿತಳಾದಳು’ ಎಂದು ಹೇಳಿದರು.

ಲಿಂಗಸಮಾನತೆ ಮಹಿಳಾ ಸಮಾವೇಶ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಶರಣತತ್ವ ಚಿಂತಕಿ ಮಹಾರಾಷ್ಟ್ರದ ಪ್ರಿಯಾಂಕಾ ಸಂಜುಕುಮಾರ ಬಿರಾದಾರ ‘ಬಸವಣ್ಣನವರಿಂದಾಗಿ ಮುಟ್ಟೆಂಬುದು ನೈಸರ್ಗಿಕ ಕ್ರಿಯೆ. ಸ್ನಾನಮಾಡಿ ಶುಚಿರ್ಭೂತಳಾಗಿ ಮನೆಯವರೊಂದಿಗೆ ಬೆರೆಯುವಂತಾಯಿತು. ದೇವಪೂಜೆಗೆ ಅರ್ಹಳಾಗುವಂತಾಯಿತು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಾಯಿತು. ಆಧ್ಯಾತ್ಮಿಕ ಸಾಧಕಳಾಗುವಂತಾಯಿತು’ ಎಂದು ಸ್ಮರಿಸಿದರು.

ನಗರಸಭೆ ಮಾಜಿ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ಶಾರದಾ ಪಾನಘಂಟಿ, ಭೈರವಿ ಅಗಡಿ, ಲಕ್ಷ್ಮಿದೇವಿ ಸಿ.ವಿ.ಸಿ, ಕಿಶೋರಿ ಬೂದನೂರ, ನಿರ್ಮಲಾ ಬಳ್ಳೊಳ್ಳಿ, ಸುಜಾತ ಹಲಗೇರಿ, ಉಮಾ ಪಾಟೀಲ, ಮಧುಮತಿ ಪಾವಲಿಶೆಟ್ಟರ್, ಮಹಾದೇವಿ ಮಿಟ್ಲಕೋಡ, ಸೌಮ್ಯ ನಾಲವಾಡ, ರೇಖಾ ಮೆಳ್ಳಿಕೇರಿ, ಹೇಮಲತಾ ಬೊಮ್ಮನಾಳ, ಜ್ಯೋತಿ ಗೊಂಡಬಾಳ, ಅರುಣಾ ನರೇಂದ್ರ, ಜಯಶ್ರೀ ಕೊಟ್ರೇಶ, ಭಾರತಿ ಸಾಳುಂಕೆ, ವೀಣಾ ಹೊಳಗುಂದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-35-2125410695

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.