ಕುದೂರು (ಮಾಗಡಿ): ಅಂಧಶ್ರದ್ಧೆ ಹಾಗೂ ಮೌಢ್ಯದ ವಿರುದ್ಧ ಸಮರ ಸಾರಿದ ಬಸವೇಶ್ವರರು, ಸಾಮಾಜಿಕವಾಗಿ ದೂರ ತಳ್ಳಲ್ಪಟ್ಟವರ ಪಾಲಿನ ಆಶಾಕಿರಣವಾಗಿದ್ದಾರೆ ಎಂದು ವೀರಶೈವ ಲಿಂಗಾಯಿತ ಬಳಗದ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಹೇಳಿದರು.

ಕುದೂರಿನ ಬಸ್ ನಿಲ್ದಾಣದಲ್ಲಿ ವೀರಶೈವ ಲಿಂಗಾಯಿತ ಬಳಗ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಸರಳ ವಚನಗಳ ಮೂಲಕ ಶೋಷಿತರು ಮತ್ತು ಬಡವರ ಬದುಕಿಗೆ ಬಸವಣ್ಣನವರು ಹೊಸ ಭಾಷ್ಯ ಬರೆದರು. ಆಚಾರ, ವಿಚಾರ ಹಾಗೂ ಸಂಸ್ಕಾರಯುತ ವಚನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೂಢನಂಬಿಕೆ ತಾಂಡವವಾಡುತ್ತಿದ್ದ ಕಾಲದಲ್ಲಿ ದಲಿತ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದ ಜಗಜ್ಯೋತಿ ಬಸವಣ್ಣ ಇಡೀ ವಿಶ್ವಕ್ಕೆ ಮಾದರಿ ಆಗಿದ್ದಾರೆ ಎಂದು ವೀರಶೈವ ಮುಖಂಡ ನಾಗರಾಜು ಹೇಳಿದರು.

ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಬಸವಣ್ಣ ಜನರಲ್ಲಿ ಸಮಾನತೆ ಆತ್ಮವಿಶ್ವಾಸ ಮೂಡಿಸಿದರು. ಅವರ ತತ್ವ ಸಿದ್ಧಾಂತಗಳು ಸಾರ್ವಕಾಲಿಕವಾಗಿದ್ದು, ಎಲ್ಲರೂ ಒಪ್ಪುವಂತಿವೆ. ಅವರ ಆದರ್ಶಮಯ ಜೀವನ ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ ಎಂದು ತಿಳಿಸಿದರು.

ಮಹೇಶ್, ರಂಗಸ್ವಾಮಿ, ರೇಣುಕ ಪ್ರಸಾದ್, ಗುರುನಾಥ್, ದ್ವಾರಕನಾಥ್, ಜಗದೀಶ್ ರಾಥೋಡ್, ಮಹೇಶ್, ಬಿ.ಜಿ. ಕೃಷ್ಣಕುಮಾರ್, ಶಂಕರ್, ನಟರಾಜು, ಕುಮಾರ್, ಉದಯ್ ಕುಮಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-14-1241399392

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.