ಕುಂದಾಪುರ: ಸಂಘಟನೆಯ ಮೂಲಕ ಯುವಜನರು ಸಮಾಜ ಸೇವೆಯನ್ನು ನಿರಂತರವಾಗಿ 15 ವರ್ಷಗಳ ಕಾಲ ಮುನ್ನಡೆಸಿಕೊಂಡು ಬರುತ್ತಿರುವುದು ಸಾಧನೆಯೇ ಸರಿ ಎಂದು ತಾಲ್ಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಹೇಳಿದರು.

ಕೋಟೇಶ್ವರ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಆಶ್ರಯದಲ್ಲಿ ಇಲ್ಲಿನ ವ್ಯಾಸರಾಜ ಮಠದ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ವಲಯ ಸಮಾವೇಶ, ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ, ಕೊಡೆ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುರೇಂದ್ರ ಶೆಟ್ಟಿ, ಗಾಣಿಗ ಸಮುದಾಯ ಸುಸಂಸ್ಕೃತ ಹಾಗೂ ಸಜ್ಜನಿಕೆಯ ಸಮುದಾಯವಾಗಿದ್ದು, ಸಂಘಟನೆಯ ಮೂಲಕ ಸಮಾಜವನ್ನು ಮುನ್ನಡೆಸುವ ಎಲ್ಲ ಯುವಕರು ಅಭಿನಂದನೆಗೆ ಅರ್ಹರು ಎಂದರು. ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಬಿ.ಜಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕುಮಾರ್ ಶುಭಹಾರೈಸಿದರು. ನಿವೃತ್ತ ಸೈನಿಕ ಕರುಣಾಕರ ಗಾಣಿಗ, ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ, ರಾಜ್ಯ ಮಟ್ಟದ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಪೃಥ್ವಿರಾಜ್ ಆರ್.ಗಾಣಿಗ, ಅವನಿಕಾ ಜಿ, ರಿಧಿಮಾ ಅವರನ್ನು ಗೌರವಿಸಲಾಯಿತು. ಗ್ರಾ.ಪಂ ಮಾಜಿ ಸದಸ್ಯರಾದ ಲಕ್ಷ್ಮಿ ಗಾಣಿಗ, ಪಾರ್ವತಿ ಗಾಣಿಗ, ಶಂಕರನಾರಾಯಣ ಗಾಣಿಗ, ಪ್ರಭಾವತಿ ಗಾಣಿಗ, ಜಯಂತಿ ಗಾಣಿಗ, ಮಂಜುಳಾ ಗಾಣಿಗ, ಪ್ರಭಾಕರ ಬಿ.ಕುಂಭಾಶಿ ಹಾಗೂ ಹರೀಶ್ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಂಘಟನೆಯ ಅಧ್ಯಕ್ಷೆ ಸವಿತಾ ಗಾಣಿಗ ಉಪಸ್ಥಿತರಿದ್ದರು.

ವಿಚಾರ ಮಂಡನೆ: ಗೋಷ್ಠಿಯಲ್ಲಿ ಆರೋಗ್ಯ ಸಮಸ್ಯೆ ಕುರಿತು ಆಲಂದೂರು ಮಂಜುನಾಥ್, ಸರ್ಕಾರಿ ಸೌಲಭ್ಯಗಳು ಹಾಗೂ ಶೈಕ್ಷಣಿಕ ಸಹಾಯಧನ ಕುರಿತು ಗಣೇಶ್ ಚೆಲ್ಲಿಮಕ್ಕಿ, ಸಂಘಟನೆಯಲ್ಲಿನ ಸವಾಲುಗಳ ಕುರಿತು ನರೇಂದ್ರ ಕುಮಾರ್ ಕೋಟ ವಿಚಾರ ಮಂಡನೆ ಮಾಡಿದರು. ಶಿಕ್ಷಕ ಶೇಖರ ಗಾಣಿಗ ಬೀಜಮಕ್ಕಿ ಸಮನ್ವಯಕಾರರಾಗಿದ್ದರು. ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ ಗಾಣಿಗ, ಪತ್ರಕರ್ತ ರಾಜೇಶ್ ಗಾಣಿಗ ಅಚ್ಲಾಡಿ ಭಾಗವಹಿಸಿದ್ದರು.

ಮಂಜುನಾಥ್ ಕೆ.ಎಸ್ ಸ್ವಾಗತಿಸಿದರು. ಕಲಾವತಿ ಗಾಣಿಗ ಪ್ರಾರ್ಥಿಸಿದರು. ಪತ್ರಕರ್ತರಾದ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣೂತ್ ಗಾಣಿಗ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-28-1404755912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.