ಕುರುಗೋಡು: ‘ಒಬ್ಬ ವ್ಯಕ್ತಿ ಸಂಸ್ಕೃತಿ, ಸಂಸ್ಕಾರ ತುಂಬಿದ ಶಕ್ತಿಯಾಗಿ ಪರಿಪೂರ್ಣತೆ ಪಡೆಯಬೇಕಾದರೆ ಗುರುವಿನ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಉಪನ್ಯಾಸಕಿ ವಿದ್ಯಾಶ್ರೀ ಅಭಿಪ್ರಾಯಪಟ್ಟರು.

ಇಲ್ಲಿನ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡನೇ ಶಿವಾನುಭನ ಸಂಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಬದಲಾದ ಜೀವನಶೈಲಿಯಲ್ಲಿ ಗುರುಶಿಷ್ಯರ ಭಾವನಾತ್ಮಕ ಸಂಬಂಧದ ಪರಂಪರೆ ಕಣ್ಮರೆಯಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕವಿ ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಗುರು ಕುವೆಂಪು ಅವರ ಬಗಗೆ ಬರೆದ ಸಾಲುಗಳು ಗುರುಶಿಷ್ಯ ಪರಂಪರೆಯ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತವೆ. ಸ್ವಾಮಿ ವಿವೇಕಾನಂದರು ವಾಕ್ ಸಾಮರ್ಥ್ಯದಿಂದ ವಿಶ್ವಮಟ್ಟದಲ್ಲಿ ಹೆಸರು ಮಾಡಿದರೂ ಅವರ ಗುರು ರಾಮಕೃಷ್ಣ ಪರಮಹಂಸ ಅವರನ್ನು ನೆನೆಯುವುದನ್ನು ಮರೆಯಲಿಲ್ಲ’ ಎಂದರು.

‘ಗೊಂದಲ, ಸವಾಲುಗಳನ್ನು ಎದುರಿಸಿ ಪರಿಪೂರ್ಣತೆ ಪಡೆಯಬೇಕಾದರೆ ಗುರುವಿನ ಸರಿಯಾದ ಮಾರ್ಗದರ್ಶನದಲ್ಲಿ ನಡೆಯಬೇಕು’ ಎಂದು ತಿಳಿಸಿದರು.

ಸಿಪಿಐ ಬಾಳನಗೌಡ ಎಸ್.ಎಂ. ಮಾತನಾಡಿ, ‘ಶ್ರೇಷ್ಠ ಗುರು ತಮ್ಮ ಸರಳತೆ, ನಮ್ರತೆ ಹಾಗೂ ಜ್ಞಾನದಿಂದ ಶಿಷ್ಯರಿಗೆ ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾರೆ. ತಂದೆ– ತಾಯಿ ನಮ್ಮನ್ನು ಪ್ರಪಂಚಕ್ಕೆ ಪರಿಚಯ ಮಾಡಿಸಿದರೆ, ಗುರುವು ಪ್ರಪಂಚದ ಪರಿಚಯ ಮಾಡಿಸುತ್ತಾರೆ’ ಎಂದರು.

‘ನಾಡಿನಲ್ಲಿ ವಿರಕ್ತಮಠಗಳು ಅನ್ನ, ಅಕ್ಷರ ಮತ್ತು ವಸತಿ ಎನ್ನುವ ತ್ರಿವಿಧ ದಾಸೋಹ ಸೇವೆಯಲ್ಲಿ ಮುಂಚೂಣಿಯಲ್ಲಿವೆ. ಕುರುಗೋಡು ವಿರಕ್ತ ಮಠವೂ ಅವುಗಳ ಸಾಲಿನಲ್ಲಿ ಸೇರಲಿ’ ಎಂದು ಹಾರೈಸಿದರು.

ಸಾನ್ನಿಧ್ಯವಹಿಸಿದ್ದ ನಿರಂಜನಪ್ರಭು ಮಹಾಸ್ವಾಮಿ ಮಾತನಾಡಿ, ‘ಗುರುವು ಮಾನವನಿಗೆ ತಿಳಿಯದ ವಿಷಯವನ್ನು ತಿಳಿಸಿ ಅಜ್ಞಾನದಿಂದ ಜ್ಞಾನಕ್ಕೆ ಮತ್ತು ಲೌಕಿಕ ಜೀವನದಿಂದ ಅಧ್ಯಾತ್ಮದ ಉನ್ನತಿಗೆ ಕೊಡೊಯ್ಯುವ ಸೇತುವೆಯಾಗಿದ್ದಾರೆ’ ಎಂದರು.

ಶ್ರೀಧರಗಡ್ಡೆ ಮಠದ ಮರಿಕೊಟ್ಟೂರು ದೇಶಿಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-25-2135370101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.