ಕುಶಾಲನಗರ: ಜಗಜ್ಯೋತಿ ಶ್ರೀ ಬಸವೇಶ್ವರರ ಜೀವನ ಸಂದೇಶ ಹಾಗೂ ಬದುಕಿನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ, ಕುಶಾಲನಗರ ತಾಲ್ಲೂಕು ಘಟಕ ಆಶ್ರಯದಲ್ಲಿ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 6ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವ ಜಯಂತಿಯಲ್ಲಿ ಬಸವಣ್ಣನವರನ್ನು ಸ್ಮರಣೆ ಮಾಡುತ್ತೇವೆ. ಅವರ ಚಿಂತನೆ ಹಾಗೂ ಅವರು ಕೊಟ್ಟ ಜೀವನ ಸಂದೇಶಗಳನ್ನು ಹೇಳುತ್ತೇವೆ. ಆದರೆ, ನಾವು ಅವುಗಳನ್ನು ಎಷ್ಟು ಅನುಸಂಧಾನ ಮಾಡುತ್ತೇವೆ ಎಂಬುದನ್ನು ಯೋಚಿಸಿದರೆ ನಿಜವಾಗಲು ನಾವು ಬಸವಣ್ಣ ಅವರನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಮೂಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನವನ್ನು ಸ್ವೀಕಾರ ಮಾಡಿ 75ನೇ ಸ್ವಾತಂತ್ರ್ಯ ಭಾರತದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಾರತ ಸಂವಿಧಾನದ ಮೂಲ ಆಶಯದಂತೆ ರಾಷ್ಟ್ರವನ್ನು ಕಟ್ಟುವ ಸಂಕಲ್ಪ ಮಾಡಿದ್ದೇವೆ. ಸಂವಿಧಾನದ ಎಲ್ಲ ಆಶಯಗಳನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಆಲೋಚನೆ ಮಾಡಿ ಕನ್ನಡದ ಮಣ್ಣಿನ ಸಂತ ಇಡೀ ಜಗತ್ತಿಗೆ ಬಿತ್ತರಿಸಿದ್ದಾರೆ, ಅವರೇ ಜಗಜ್ಯೋತಿ ಬಸವಣ್ಣ ಎಂದು ಬಣ್ಣಿಸಿದರು.

‘ಸಾಮಾಜಿಕ ನ್ಯಾಯ ಕೊಟ್ಟು, ಎಲ್ಲ ವರ್ಗದವರ ದನಿಯಾಗಿ, ಎಲ್ಲ ವರ್ಗಕ್ಕೆ, ಯಾವುದೇ ಜಾತಿ, ವರ್ಗ, ವರ್ಣ, ಭೇದವಿಲ್ಲದ ಸಮಸಮಾಜವನ್ನು ಬಸವಣ್ಣ ಕಟ್ಟುತ್ತಾರೆ. ಹೆಣ್ಣು ಶಾಪ ಎಂಬ ಕಾಲಘಟ್ಟದಲ್ಲಿ ಹೆಣ್ಣಿಗೆ ದೈವತ್ವ ಭಾವನೆ ನೀಡಿ, ಸಮಾಜದಲ್ಲಿ ಸಮಾನತೆ ನೀಡಿ ಗೌರವಿಸಿದ ಬಸವಣ್ಣ ಅವರನ್ನು ಸ್ತ್ರೀ ಸಮೂಹ ಪೂಜಿಸಬೇಕಾಗಿದೆ ಎಂದರು.

‘ಇಂದು ವಿಜ್ಞಾನ ತಂತ್ರಜ್ಞಾನ ಇಡೀ ಜಗತ್ತನ್ನು ಆವರಿಸಿದೆ. ಆದರೆ, ಮನಷ್ಯ ಆಂತರಿಕ ಸಂತೋಷ ಕಳೆದುಕೊಳ್ಳುತ್ತಿದ್ದಾನೆ. ನೆಮ್ಮದಿ ಇಲ್ಲದೆ ಬದುಕು ದುಸ್ತರವಾಗುತ್ತಿದೆ’ ಎಂದು ಹೇಳಿದರು.

ಪೋಷಕರು ತಮ್ಮ ಮಕ್ಕಳಿಗೆ ಶರಣರ ವಚನಗಳನ್ನು ಹೇಳಿಕೊಡಬೇಕು. ಬಸವಣ್ಣ ಹಾಗೂ ಶರಣರ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಆಶಯ ನುಡಿಗಳನ್ನಾಡಿ, ಪ್ರತಿಯೊಬ್ಬರಿಗೂ ಬಸವಾದಿ ಶರಣರ ತತ್ವ, ಆದರ್ಶಗಳು ದಾರಿ ದೀಪವಾಗಿವೆ. ಬಸವಾದಿ ಶರಣರ ಬದುಕು ಸಮಾಜಮುಖಿ ಆಗಿತ್ತು. ಯಾವಾಗಲು ಅವರ ನಡೆ, ನುಡಿ ಒಂದೇ ಆಗಿತ್ತು. ಅವರ ತತ್ವಗಳನ್ನು ಹಾಗೂ ಆದರ್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರೂ ತಮ್ಮ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದರು.

ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರು ನಾಡಿಗೆ ನೀಡಿದ ಸಪ್ತಸೂತ್ರ ಹಾಗೂ ವಚನಗಳನ್ನು ತಾಯಂದಿರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಇದರಿಂದ ಸಮಾಜದಲ್ಲಿನ ಅಂಕುಡೊಂಕು, ಮೇಲುಕೀಳು ಎಂಬ ಭೇದಭಾವ ಹೋಗಲಾಡಿಸಿ, ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಬಸವಣ್ಣ ಅವರು ನಾಡಿಗೆ ಸೃಜನ ಸಾಹಿತ್ಯ ಕೊಟ್ಟಿದ್ದಾರೆ, ಶರಣರು ಸಮಾಜವನ್ನು ಉದ್ಧಾರ ಮಾಡುವ ವಚನ ಸಾಹಿತ್ಯಗಳನ್ನು ನೀಡಿದ್ದಾರೆ. ಇವುಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ, ಬಸವಾದಿಶರಣರ ತತ್ವ, ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.

ಮೈಸೂರು ಬಸವಜ್ಞಾನ ಮಂದಿರದ ಪೀಠಾಧ್ಯಕ್ಷೆ ಡಾ. ಮಾತೆ ಬಸವಾಂಜಲಿದೇವಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕುಶಾಲನಗರ ತಾಲ್ಲೂಕು ಘಟಕದ ಎಚ್.ಎಂ.ಮಧುಸೂದನ್. ಅಧ್ಯಕ್ಷತೆ ವಹಿಸಿದ್ದರು.

ಕೊಡ್ಲಿಪೇಟೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಶಿವಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕುಶಾಲನಗರ ತಾಲ್ಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಎಸ್. ಧರ್ಮೇಂದ್ರ, ಬಿ.ಬಿ. ಲೋಕೇಶ್, ಬಸವೇಶ್ವರ ಸೌಹಾರ್ದ ಸಹಕಾರ ಸಂಘ ಅಧ್ಯಕ್ಷ ಬಿ.ಎಸ್.ಶಾಂಭಶಿವಮೂರ್ತಿ, ಕರ್ನಾಟಕ ರಾಜ್ಯ ವೀರಶೈವ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್. ನಂದೀಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಮಹಿಳಾ ಘಟಕ ಅಧ್ಯಕ್ಷೆ ದೀಪಿಕ ಕರುಣ್, ಯುವ ಘಟಕದ ಅಧ್ಯಕ್ಷ ಮೋಕ್ಷತ್ರಾಜ್, ಅಕ್ಕನ ಬಳಗ ಕಮಲ ಉದಯಕುಮಾರ್, ಹೇಮಲತಾ, ಎಸ್.ಕೆ.ಸೌಭಾಗ್ಯ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-306817924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.