ಲಕ್ಕುಂಡಿ: ‘ಅಖಂಡ 38 ವರ್ಷಗಳ ಮೌನ ಆಚರಣಿಯ ಮೂಲಕ ಈ ಸಮಾಜ ತಿದ್ದಲು ಲಿಂಗೈಕ್ಯ ಬಸವರಾಜೇಂದ್ರ ಸ್ವಾಮೀಜಿಗಳ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದ್ದು, ನೂತನ ವಧುವರರಿಗೆ ಶ್ರೀಗಳ ಮೌನ ತಪ್ಪಸ್ಸಿನ ಆಶೀರ್ವಾದದಿಂದ ದಾಂಪತ್ಯ ಜೀವನ ಉತ್ತಮವಾಗಿರಲಿದೆ’ ಎಂದು ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿಯ ಅಲ್ಲಮ್ಮಪ್ರಭುದೇವರ ಮಠದಲ್ಲಿ ಬಸವರಾಜೇಂದ್ರ ಸ್ವಾಮೀಜಿಗಳ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಲ್ಲಮ್ಮಪ್ರಭುದೇವರು ಗ್ರಾಮಕ್ಕೆ ಬಂದು ಧ್ಯಾನ ಮಾಡಿದ ಈ ಸ್ಥಳವು ಪವಿತ್ರವಾಗಿದೆ. ಇಲ್ಲಿ ಸಕಾರಾತ್ಮಕ ಚಿಂತನೆಗಳು ಮೈಗೂಡಿವೆ. ಆದ್ದರಿಂದ ನೂತನ ವಧುವರರು ಜೀವನದಲ್ಲಿ ಆಧಾತ್ಮಿಕ ಚಿಂತನೆಗಳ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಮಠದ ಜತೆ ಬಾಂಧವ್ಯವನ್ನು ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು ಎಂದರು.

ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಗುಡ್ಡದ ಸುಕ್ಷೇತ್ರದ ಚನ್ನಬಸವ ಶಿವಯೋಗಿಗಳು ಮಾತನಾಡಿ, ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಭರದಲ್ಲಿ ಹೆಚ್ಚೆಚ್ಚು ಹಣ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವುದರ ಬದಲು ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಮದುವೆಯಾದರೆ ಆರ್ಥಿಕವಾಗಿ ಉಳಿತಾಯ ಮಾಡಿ ಮಠ ಮಾನ್ಯಗಳನ್ನು ಬೆಳೆಸಬಹುದು ಎಂದರು.

ಮಹಾಂತಯ್ಯಶಾಸ್ತ್ರಿಗಳು ಬದ್ನಿಮಠ, ಶಂಕ್ರಯ್ಯಶಾಸ್ತ್ರಿಗಳು ಹಿರೇಮಠ ಅವರ ನೇತೃತ್ವದಲ್ಲಿ 6 ಜೋಡಿ ಸಾಮೂಹಿಕ ವಿವಾಹಗಳು ನೆರವೇರಿದವು.

ಇದೇ ಸಂದರ್ಭದಲ್ಲಿ ಮಠದ ಜೀರ್ಣೋದ್ದಾರಕ್ಕೆ ಲಕ್ಷ್ಮವ್ವ ಗೌಳಿ ₹1 ಲಕ್ಷ ದೇಣಿಗೆ ನೀಡಿದರು. ಇನ್ನೂ ತೇರಿನ ಮನೆ ನಿರ್ಮಾಣಕ್ಕೆ ಕುರುಬ ಸಮಾಜದಿಂದ ₹65 ಸಾವಿರ ದೇಣಿಗೆ ನೀಡಲಾಯಿತು. ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮುದಕಯ್ಯ ಪತ್ರಿಮಠ ಸ್ವಾಮಿಗಳು, ಕೊಟ್ರಯ್ಯಶಾಸ್ತ್ರಿಗಳು ನರಗುಂದಮಠ ವೇದಿಕೆಯಲ್ಲಿ ಇದ್ದರು. ಅಲ್ಲಮ್ಮಪ್ರಭುದೇವರ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-23-1994070851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.