ಲಕ್ಷ್ಮೇಶ್ವರ: ‘ಶಂಕರಾಚಾರ್ಯರರು ಸಮಾನತೆಯ ತತ್ವ ಸಾರಿದವರು. ಅವರ ತತ್ವಗಳು ಜಗತ್ತಿನ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ. ಅಂತಹ ಮಹಾನ್ ಶ್ರೇಷ್ಠರನ್ನು ಒಂದೇ ಜಾತಿಗೆ ಸೀಮಿತಗೊಳಿಸದಿರಿ, ಎಲ್ಲ ಜಾತಿಯ ಎಲ್ಲ ಧರ್ಮದವರಿಗೂ ಅವರು ನೀಡಿದ ಕೊಡುಗೆಗೆಗಳು ಎಲ್ಲ ಕಾಲಕ್ಕೂ ಪ್ತಸ್ತುತ’ ಎಂದು ತಹಶೀಲ್ದಾರ್ ಧನಂಜಯ ಎಂ. ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ‘ಮಹಾನ್ ವ್ಯಕ್ತಿಗಳ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಸಭೆಯಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಅರವಿಂದ ದೇಶಪಾಂಡೆ, ಬಿ.ಕೆ.ಕುಲಕರ್ಣಿ,ಧೃವರಾಜ ಬೆಟಗೇರಿ, ಸಾಹುಕಾರ, ರಾಘವೇಂದ್ರ ಪೂಜಾರ, ದಿಗಂಬರ ಪೂಜಾರ ಪ್ರಸನ್ನ ಕುಲಕರ್ಣಿ, ಡಿ.ಪಿ.ಹೇಮಾದ್ರಿ, ಗುರುರಾಜ ಪಾಟೀಲಕುಲಕರ್ಣಿ, ಎಸ್.ಬಿ.ಅಣ್ಣಿಗೇರಿ, ಪ್ರಶಾಂತ ಕಿಮಾಯಿ, ರೇಣುಕಾ ಶಿರಹಟ್ಟಿ, ಪ್ರಶಾಂತ ಸನದಿ, ನಿರ್ಮಲಾ, ಹಾಗೂ ಕಚೇರಿ ಸಿಬ್ಬಂದಿ, ಸಮಾಜದವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-2020323303

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.