ಲಕ್ಷ್ಮೇಶ್ವರ: ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಿಂದೂ, ಮುಸ್ಲಿಂ, ಜೈನ ಧರ್ಮದ ಅನೇಕ ಮಹಾಮಹಿಮರು ಬಂದು ಹೋಗಿದ್ದಾರೆ. ಅವರಲ್ಲಿ ಭಾವೈಕ್ಯದ ಹರಿಕಾರರಾದ ಸೂಫಿ ಸಂತ ದೂದಪೀರಾಂ ಮಹಾತ್ಮರು ಕೂಡ ಒಬ್ಬರಾಗಿದ್ದು, ದರ್ಗಾದಲ್ಲಿ ಇಂದಿಗೂ ಇವರ ಪವಾಡಗಳು ನಡೆಯುತ್ತಲೇ ಇವೆ.

18ನೇ ಶತಮಾನದಲ್ಲಿ ದೂರದ ಬಾಗ್ದಾದ್ನಿಂದ ದೆಹಲಿಗೆ ಬಂದ ಸೂಫಿ ಸಂತ ದೂದಪೀರಾಂ ಅವರು ಅಲ್ಲಿ ಜ್ಞಾನಾರ್ಜನೆ ಮಾಡುತ್ತಾರೆ. ನಂತರ ಅಲ್ಲಿಂದ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುತ್ತಾರೆ. ಒಮ್ಮೆ ಲಕ್ಷ್ಮೇಶ್ವರದ ನಿವಾಸಿಯೊಬ್ಬರು ಹುಬ್ಬಳ್ಳಿಗೆ ಹೋದಾಗ ಇವರನ್ನು ಭೇಟಿ ಆಗಿ ದರ್ಶನಾಶೀರ್ವಾದ ಪಡೆದು ಅವರ ಅಧ್ಯಾತ್ಮದ ಶಕ್ತಿಗೆ ಮನಸೋಲುತ್ತಾರೆ.

ಅವರ ಅಧ್ಯಾತ್ಮ ಶಕ್ತಿಯ ಮೇಲೆ ವಿಶ್ವಾಸ ಇಟ್ಟು ಅವರನ್ನು ಲಕ್ಷ್ಮೇಶ್ವರಕ್ಕೆ ಬರುವಂತೆ ಮನವಿ ಮಾಡುತ್ತಾರೆ. ಭಕ್ತನ ಕೋರಿಕೆಗೆ ಸ್ಪಂದಿಸಿ ದೂದಪೀರಾಂರವರು ಲಕ್ಷ್ಮೇಶ್ವರಕ್ಕೆ ಬರುತ್ತಾರೆ ಎಂಬ ಐತಿಹ್ಯವಿದೆ.

ಅವರು ಇಲ್ಲಿಗೆ ಬಂದ ನಂತರ ಜನರಲ್ಲಿನ ಅಜ್ಞಾನ, ಅಂಧಕಾರಗಳನ್ನು ಹೊಡೆದೋಡಿಸುವ ಸಲುವಾಗಿ ಪ್ರತಿದಿನ ಧರ್ಮೋದೇಶಗಳನ್ನು ಹಮ್ಮಿಕೊಳ್ಳುತ್ತಾರೆ. ಇವರ ಬೋಧನೆಗೆ ಮನಸೋತ ಸಾವಿರಾರು ಜನರು ಇವರ ಶಿಷ್ಯರಾಗುತ್ತಾರೆ. ಹಿಂದೂ-ಮುಸ್ಲಿಂ ಎನ್ನದೇ ಎಲ್ಲ ಜಾತಿ ಜನರು ದೂದಪೀರಾಂ ಅವರ ಹತ್ತಿರಕ್ಕೆ ಬಂದು ಆರೋಗ್ಯ ಭಾಗ್ಯ ಪಡೆದುಕೊಳ್ಳುತ್ತಾರೆ.

ಲಕ್ಷ್ಮೇಶ್ವರದಲ್ಲಿಯೇ ವಿಧಿವಶರಾದ ನಂತರ ಅವರಿಗಾಗಿ ಶಿಷ್ಯರು ಗದ್ದುಗೆ ನಿರ್ಮಿಸುತ್ತಾರೆ. ಅದೇ ಇಂದು ದೂದಪೀರಾಂ ದರ್ಗಾ ಎಂದು ಪ್ರಸಿದ್ಧಿ ಪಡೆದಿದೆ.

ಅನ್ನಪ್ರಸಾದ ವ್ಯವಸ್ಥೆ: ಈ ಬಾರಿ ಶಾಲೆಗಳಿಗೆ ರಜೆ ಇರುವ ಕಾರಣ ದರ್ಗಾ ಸಮಿತಿಯವರು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾರೆ. ದರ್ಗಾದ ಹತ್ತಿರ ವಾಹನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಹಳೆ ಪೊಲೀಸ್ ಠಾಣೆ ಹತ್ತಿರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ದರ್ಗಾ ಸಮಿತಿಯ ಸೇವಾ ಕಾರ್ಯಕರ್ತರು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಇನ್ನು ಬರುವ ಭಕ್ತರಿಗೆ ಕುಡಿಯುವ ನೀರು, ಅನ್ನಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-23-170622769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.