ಲಕ್ಷ್ಮೇಶ್ವರ: ‘ಬದುಕಿನುದ್ದಕ್ಕೂ ಧರ್ಮ, ಸಂಸ್ಕೃತಿ, ಪರಂಪರೆ, ಕಾಯಕ ನಿಷ್ಠೆ, ಸಮನ್ವಯತೆ ಹೀಗೆ ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಲಿಂಗೈಕ್ಯ ವೀರಗಂಗಾಧರ ಜಗದ್ಗುರುಗಳ ಆದರ್ಶ ಎಂದೆಂದಿಗೂ ಅನುಕರಣೀಯ’ ಎಂದು ಮುಕ್ತಿಮಂದಿರ ಧರ್ಮಕ್ರೇತ್ರದ ಪಟ್ಟಾಧ್ಯಕ್ಷ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಭಾನುವಾರ ಲಿಂರಂಜ ವೀರಗಂಗಾಧರ ಜಗದ್ಗುರುಗಳ 123ನೇ ಜಯಂತಿ ಅಂಗವಾಗಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರಿಸಿ ಮಾತನಾಡಿದರು.

‘ಹೆತ್ತ ತಾಯಿ ಹೊತ್ತ ಭೂಮಿಯನ್ನು ಹೇಗೆ ಮರೆಯಲು ಸಾಧ್ಯವಿಲ್ಲವೂ ಅದೇ ರೀತಿ ನಮ್ಮ ನೆಲದ ಧರ್ಮ, ಸಂಸ್ಕಾರ, ಸಂಸ್ಕೃತಿ, ಪರಂಪರೆ, ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ಸಮಾನತೆ, ಶಾಂತಿ, ಸಮೃದ್ಧಿ ನೆಲೆಗೊಳ್ಳುವಂತಾಗಲು ಲಿಂ.ವೀರಗಂಗಾಧರ ಜಗದ್ಗುರು ಸಾರಿದ ವಿಶ್ವ ಶಾಂತಿಯ ಸಂದೇಶ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮಂತ್ರ ಎಲ್ಲರ ಉಸಿರಾಗಬೇಕು’ ಎಂದರು.

ಕಲಾದಗಿಯ ಗಂಗಾಧರ ಶಿವಾಚಾರ್ಯರು ಪೂಜಾ ಕೈಕಂರ್ಯ ನೆರವೇರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-23-1181545454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.