ಮಹಾಲಿಂಗಪುರ: ‘ಶರಣರ ಸಂದೇಶಗಳು ಮತ್ತು ಅವರ ವಚನ ಸಾಹಿತ್ಯ ಇಡೀ ಮಾನವ ಕುಲಕ್ಕೆ ದಾರಿದೀಪವಾಗುವಂತಹ ಅದ್ಭುತ ಶಕ್ತಿ ಹೊಂದಿವೆ. 12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ಶಿವಶರಣರು ಸಾರಿದ ತತ್ವಗಳು ಇಂದಿಗೂ, ಎಂದೆಂದಿಗೂ ಜಗತ್ತಿಗೆ ಪ್ರಸ್ತುತವಾಗಿವೆ’ ಎಂದು ರನ್ನಬೆಳಗಲಿಯ ಕಾಶೀಬಾಯಿ ಪುರಾಣಿಕ ಹೇಳಿದರು.

ಸಮೀಪದ ರನ್ನಬೆಳಗಲಿಯ ಶಂಭುಲಿಂಗಾಶ್ರಮದ ಸಿದ್ಧಾರೂಢಮಠದಲ್ಲಿ ಮಠದ ಟ್ರಸ್ಟ್ ಕಮಿಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹುಣ್ಣಿಮೆಯ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಬಸವಣ್ಣನವರು 'ಅನುಭವ ಮಂಟಪ' ಎಂಬ ಸಂಸತ್ತನ್ನು ಸ್ಥಾಪಿಸಿದರು. ಇಲ್ಲಿ ಜಾತಿ, ಲಿಂಗ, ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. ಶರಣರು ಮಹಿಳೆಯರಿಗೂ ಪುರುಷರಷ್ಟೇ ಸಮಾನ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿದರು’ ಎಂದರು.

ಶಿರೋಳದ ರೈತ ಸೋಮಲಿಂಗಯ್ಯ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಚವರಟ್ಟಿಯ ವಿಠ್ಠಲ ಮಹಾರಾಜರು, ಮಾರಾಪುರದ ಶ್ರೀಮಂತ ಮಹಾರಾಜರು, ಶಿವಲಿಂಗಯ್ಯ ಹುನ್ನೂರ, ಮಹಾದೇವ ಕಂಬಾರ, ಸರೋಜಿನಿ ಶಿರೋಳ ಉಪನ್ಯಾಸ ನೀಡಿದರು.

ಮಲ್ಲಿಕಾರ್ಜುನ ಹೆಗ್ಗಳಗಿ, ಶಿಕ್ಷಕರಾದ ಶ್ರೀಶೈಲ ಕುಂಬಾರ, ಹಣಮಂತ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ವೆಂಕಣ್ಣ ಲೋಕಾಪುರ, ದುಂಡಣ್ಣ ಮೆಟಗುಡ್ಡ, ಬಸವರಾಜ ಪುರಾಣಿಕ, ಚಂದ್ರಶೇಖರ ಮುಂಡಗನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-19-120774235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.