ಮಹಾಲಿಂಗಪುರ: ‘ದೇಶದಲ್ಲಿ ಮಹಿಳೆಯನ್ನು ದುರ್ಗೆ, ಕಾಳಿ, ಆದಿಶಕ್ತಿ, ಅನ್ನಪೂರ್ಣೆಯ ಅವತಾರವೆಂದು ಗೌರವಿಸಲಾಗುತ್ತದೆ. ಮಾತೆಯರಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದು ರಾಷ್ಟ್ರೋತ್ಥಾನ ಪರಿಷತ್ ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಹೇಳಿದರು.

ಪಟ್ಟಣದ ಕುಬಸದ ಗಲ್ಲಿಯಲ್ಲಿ ತಾಯಂದಿರ ದಿನಾಚರಣೆ ಅಂಗವಾಗಿ ವಿದ್ಯಾಶ್ರೀ ಸ್ವಸಹಾಯ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಾತೃ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ಮಹಿಳೊ ನಿತ್ಯವೂ ಭಗವಂತನ ನಾಮಸ್ಮರಣೆ ಮಾಡಿ ದೈವ ಶಕ್ತಿ ವೃದ್ಧಿಸಿಕೊಂಡು, ಮಕ್ಕಳಲ್ಲಿಯೂ ಅಂಥ ಸಂಸ್ಕಾರ ಬೆಳೆಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಜೇಸಿ ಇಂಗ್ಲಿಷ್ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಸಿ.ವಿ. ಹುಣಶ್ಯಾಳ ಮಾತನಾಡಿದರು. ಸಂಗಪ್ಪ ಜಮಖಂಡಿ ಅಧ್ಯಕ್ಷತೆ ವಹಿಸಿದ್ದರು. ಕಾಳಿಕಾದೇವಿ ಮಂದಿರದ ಅರ್ಚಕ ದಯಾನಂದ ಆಚಾರ್ಯ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ತಾಯಂದಿರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಗಿರಿಮಲ್ಲಪ್ಪ ಯರಗಟ್ಟಿ, ಚಂದ್ರು ಯರಗಟ್ಟಿ ನೇತೃತ್ವ ವಹಿಸಿದ್ದರು. ಶಂಕ್ರೆವ್ವ ಹನಗಂಡಿ, ಕಲ್ಲವ್ವ ಗಲಗಲಿ, ಸಿದ್ದು ಹಾವನಳ್ಳಿ, ಮಲ್ಲಪ್ಪ ಹುಣಶ್ಯಾಳ, ಚೈತ್ರಾ ಯರಗಟ್ಟಿ, ಶೃತಿ ಯರಗಟ್ಟಿ, ಅನುಪಮಾ ಗಲಗಲಿ, ಅಶ್ವಿನಿ ಗಲಗಲಿ, ಭಾರತಿ ನಡಕಟ್ನಿ, ದಾಕ್ಷಾಯಿಣಿ ನಡಕಟ್ನಿ, ದಾನಮ್ಮ ಹುಣಶ್ಯಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-19-42859057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.