ಮಹಾಲಿಂಗಪುರ: ‘ಗುಪ್ತಭಕ್ತಿಯ ಮರುಳ ಶಂಕರ ದೇವರು ಶರಣರ ಒಕ್ಕುಮಿಕ್ಕ ಪ್ರಸಾದ ಸೇವಿಸಿ, ಪ್ರಸಾದಕಾಯಕರೆನಿಸಿದ್ದರು. ಅವರ ರೂಪಕ ನಿರ್ಮಾಣಶಕ್ತಿ ಅಗಾಧವಾದುದು’ ಎಂದು ಶಿಕ್ಷಕಿ ಎ.ಎ.ಕಿಚಡಿ ಹೇಳಿದರು.

ಪಟ್ಟಣದ ಬಸವನಗರದ ಬನ್ನೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬಸವ ಬಳಗದಿಂದ ಸೋಮವಾರ ಹಮ್ಮಿಕೊಂಡ 194ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಲ್ಯಾಣದ ಅನುಭವ ಮಂಟಪದ ಸಂದೇಶ ಕೇಳಿದ ಅನೇಕ ಶಿವಶರಣರು ಕಲ್ಯಾಣದತ್ತ ಧಾವಿಸಿ ಬಂದರು. ಇಂಥವರಲ್ಲಿ ಮರುಳಶಂಕರ ದೇವರೂ ಒಬ್ಬರಾಗಿದ್ದಾರೆ. ಇತರೆ ವಚನಕಾರರಕ್ಕಿಂತ ಇವರ ವಚನಾಂಕಿತ ತೀರ ಭಿನ್ನವಾಗಿದ್ದು, ಬಹಳ ದೊಡ್ಡದಿದೆ. ಪ್ರತಿಯೊಂದು ವಚನದ ಕೊನೆಯಲ್ಲಿ ನಿಮ್ಮ ಧರ್ಮ ಎಂದು ಮೂರು ಬಾರಿ ಹೇಳಿದ್ದಾರೆ’ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ಚನಬಸು ಹುರಕಡ್ಲಿ ದಂಪತಿಯಿಂದ ಬಸವ ಚಿತ್ರಕ್ಕೆ ಪೂಜೆ ನೆರವೇರಿತು. ನಂತರ ಬಸವ ಚಿತ್ರ ನೀಡಿ ದಂಪತಿಯನ್ನು ಸನ್ಮಾನಿಸಲಾಯಿತು. ಸಾಮೂಹಿಕ ಪ್ರಾರ್ಥನೆ, ಬಸವಣ್ಣನ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎಂ.ಆರ್.ಬಿದರಿ, ಹುಮಾಯೂನ ಸುತಾರ, ದಾಕ್ಷಾಯಿಣಿ ಮಂಡಿ ವಚನ ವಿಶ್ಲೇಷಣೆ ಮಾಡಿದರು.

ಸುಭಾಷ ಸೋರಗಾಂವಿ, ರಾಜು ಗಲಗಲಿ, ಶಿವಾನಂದ ಬಿದರಿ, ಸರೋಜಿನಿ ಶಿರೋಳ ವಚನ ಗಾಯನ ಪ್ರಸ್ತುತಪಡಿಸಿದರು. ಬಸವರಾಜ ಮೇಟಿ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಚಂದ್ರು ಗೊಂದಿ, ಗಿರೀಶ ಶಿರೋಳ, ಎ.ಬಿ.ಗೌಡಪ್ಪನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-19-1737119647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.