ಮಹಾಲಿಂಗಪುರ: ‘ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಸಂಸ್ಕೃತಿ, ಧರ್ಮ ಮತ್ತು ಆಚರಣೆಗಳನ್ನು ಮರೆತು ಎಲ್ಲದರಿಂದಲೂ ದೂರವಾಗುತ್ತಿದ್ದೇವೆ. ಪ್ರತಿಯೊಬ್ಬರ ಮನೆಯಲ್ಲೂ ಹಿರಿಯರು ಮಾಡಿಕೊಂಡು ಬಂದಿರುವ ಆಚರಣೆಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ’ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಚಕ್ರ ಪ್ರತಿಷ್ಠಾಪನೆಯ ಐದನೇ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಿದ್ದೇವೆ ಎನ್ನುವ ಭಾವನೆಗಿಂತ, ಅವರಿಗೆ ಮೊದಲಿಗೆ ಒಳ್ಳೆಯ ಆಚರಣೆಗಳನ್ನು ಕಲಿಸಬೇಕು. ಇದರಿಂದ ಅವರಲ್ಲಿ ಪ್ರಬುದ್ಧತೆ ಬೆಳೆಯುತ್ತದೆ. ಮಕ್ಕಳಿಗೆ ತಾಯಿ ಸಂಸ್ಕಾರ ಕಲಿಸಿದರೆ ಯಾರೂ ದಾರಿ ತಪ್ಪಲು ಸಾಧ್ಯವಿಲ್ಲ’ ಎಂದರು.

ಹುಲ್ಯಾಳದ ಮಂಜು ಗಲಗಲಿ, ಮಹಾಲಿಂಗಪ್ಪ ಲಾತೂರ ಮಾತನಾಡಿದರು. ಪೂಜಾ ಕಾರ್ಯಕ್ರಮದ ಅಂಗವಾಗಿ ಅಭಿಷೇಕ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಮತ್ತು ಉಡಿ ತುಂಬುವ ಕಾರ್ಯಕ್ರಮಗಳು ನಡೆದವು.

ಸಂಗಮೇಶ ಚಟ್ಟಿಮಠ, ಶಿವಾನಂದ ಚಟ್ಟಿಮಠ ಪೂಜೆ ಕೈಂಕರ್ಯ ನಡೆಸಿದರು. ವಿಜಯಕುಮಾರ ಕಾಳಗಿ, ಎಂ.ಐ.ಹುಡೇದಮನಿ, ಎಂ.ಆರ್.ತೇರದಾಳ, ಚನಬಸು ಹೊಸೂರ, ಈರಣ್ಣ ಅಂಬಿ, ರಾಜು ಬೀಳಗಿ, ರಮೇಶಬಾಯಿ ಪಟೇಲ ದಂಪತಿಯನ್ನು ಸನ್ಮಾನಿಸಲಾಯಿತು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಲ್ಲು ನಿಂಬರಗಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಸತೀಶ ಸೋರಗಾಂವಿ, ಮಹಾದೇವ ಹುಣಶ್ಯಾಳ, ಚಂದು ಕಾಗಿ, ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಎಸ್.ಐ.ನುಚ್ಚಿ, ಎನ್.ಎಸ್.ಷಣ್ಮುಖ, ವಿಜಯ ಬಾಡನವರ, ನಾಗಪ್ಪ ಮುದಕವಿ, ಈರಪ್ಪ ಕೊಕಟನೂರ, ಗಂಗಪ್ಪ ಕರಡಿ, ಮುದಕಪ್ಪ ಬೇವಿನಗಿಡದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-909029133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.