ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದ ಯಾಗಶಾಲೆಯಲ್ಲಿ ಭಾನುವಾರ ರಾಮತಾರಕ ಹೋಮ ಸಂಭ್ರಮದಿಂದ ಜರುಗಿತು.

ಕಳೆದೆರಡು ದಿನದಿಂದ ಭಕ್ತ ಸಮೂಹ ಜಪಮಾಲೆ ಹಿಡಿದು ರಾಮನಾಮ ಸ್ಮರಣೆ, ಜಪ ವಿಧಿಯಲ್ಲಿ ಪಾಲ್ಗೊಂಡಿತ್ತು. ಲೋಕಕಲ್ಯಾಣಾರ್ಥವಾಗಿ ಹೋಮ, ಸೀತಾರಾಮ ಕಲ್ಯಾಣೋತ್ಸವ, ರಾಮ ಪಟ್ಟಾಭಿಷೇಕ ನಡೆಸಿ ದೇಶದಲ್ಲಿ ಮಳೆ–ಬೆಳೆ ಸುಭಿಕ್ಷಕ್ಕೆ ವಿಶೇಷ ಪೂಜೆ, ಪ್ರಾರ್ಥನೆ ಮೂಲಕ ಸಂಕಲ್ಪ ಮಾಡಲಾಯಿತು.

ಭಕ್ತ ಸಮೂಹ ಶ್ರೀರಾಮ ಜಯರಾಮ ಜಯಜಯ ರಾಮ ಜಯಘೋಷ ಹಾಕಿ ಭಕ್ತಿ ಸಮರ್ಪಣೆ ಮಾಡಿತು. ಸೀತಾ, ರಾಮ, ಆಂಜನೇಯ, ಲಕ್ಷ್ಮಣರ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಭಕ್ತರು ಕೀರ್ತನೆ ಹಾಡಿ, ಗುರು ಭಜನೆ ಮಾಡಿದರು.

ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡರು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸ ಟ್ರಸ್ಟ್ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-43-242733871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.