ಮಲೇಬೆನ್ನೂರು: ಪಟ್ಟಣದ ಹೊರ ವಲಯದಲ್ಲಿನ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಲೋಕ ಕಲ್ಯಾಣಾರ್ಥವಾಗಿ ನಡೆಸುತ್ತಿರುವ ವಿವಿಧ ಧಾರ್ಮಿಕ ಪೂಜೆ, ಹವನ ವಿಧ್ಯುಕ್ತವಾಗಿ ಆರಂಭವಾದವು.

ಋತ್ವಿಜರು ದೇವಾಲಯದ ಆವರಣದ ಸ್ಥಾಪಿತ ಯಾಗಶಾಲೆಯಲ್ಲಿ ಪುಣ್ಯಾಹ ಮಾತೃಕಾ ಪೂಜೆ, ಗಣಪತಿ ಪೂಜೆ ಮಾಡಿ ಕಲಶ ಸ್ಥಾಪಿಸಲಾಯಿತು.

ರುದ್ರ ಪಾರಾಯಣ, ಚಂಡಿ ಸಪ್ತಶತೀ ಪಾರಾಯಣ ಮಾಡಿದ ನಂತರ ದುರ್ಗಾದೀಪ ನಮಸ್ಕಾರ, ಸುದರ್ಶನ, ರಾಮ ತಾರಕ ಜಪ, ಆಂಜನೇಯ ಮೂಲ ಮಂತ್ರ ಜಪ, ದ್ವಾದಶ ಶತನಾರಿಕೇಳ ಖಂಡಗಣ ಹವನ, ಪೂರ್ಣಾಹುತಿ ಕಾರ್ಯಗಳು ಚಿತ್ರದುರ್ಗದ ಅನಂತ ಭಟ್ಟರ ನೇತೃತ್ವದಲ್ಲಿ ನಡೆದವು.

ಲಘು ರುದ್ರಹವನ ಇಂದು: ಏ. 1ರಂದು ಬೆಳಿಗ್ಗೆ 8.30ರಿಂದ ಲಘು ರುದ್ರಹವನ ಮತ್ತು ಬೆಳಿಗ್ಗೆ 10.30ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದೆ.

ಸಂಜೆ 5.30ರಿಂದ ಅಷ್ಟಾವಧಾನ ಸೇವೆ, 6ಕ್ಕೆ ಗಾಯಕಿಯರಾದ ಲಕ್ಷ್ಮಿ ನಾಗರಾಜ್ ಹಾಗೂ ವಿದುಷಿ ಇಂದು ನಾಗರಾಜ್ ಅವರಿಂದ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಶತಚಂಡಿಕಾ ಯಾಗ ನಾಳೆ: ಏ. 2ರಂದು ಬೆಳಿಗ್ಗೆ 7.30ರಿಂದ ಶತಚಂಡಿಕಾ ಯಾಗ ಹಾಗೂ ಹನುಮ ಜಯಂತಿ ಅಂಗವಾಗಿ ರಾಮತಾರಕ ಹವನ, ಆಂಜನೇಯ ಮೂಲ ಮಂತ್ರ ಹವನ ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ವಾಗ್ಮಿ ಪ್ರೊ.ಕೃಷ್ಣೇಗೌಡ ಅವರಿಂದ ‘ಭಕ್ತಿ ಮತ್ತು ಭಗವಂತ’ ವಿಷಯ ಕುರಿತು ನುಡಿ ಸೇವೆ ಇರುತ್ತದೆ ಎಂದು ಬಿ. ಚಿದಾನಂದಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-43-2003004067

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.