ಮಂಡ್ಯ: ‘ದೇವರನ್ನು ಎಲ್ಲಿ ನೋಡಿದ್ದೀರಾ ಎಂದರೆ ಹೌದು ಸಿದ್ಧಗಂಗಾ ಮಠದಲ್ಲಿ ಮಾನವ ರೂಪದಲ್ಲಿ ಶ್ರೀಗಳನ್ನು ನೋಡಿದ್ದೇವೆ ಎನ್ನಬಹುದು’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.

ನಗರದ ಸಿದ್ಧಗಂಗಾಶ್ರೀ ಉದ್ಯಾನದಲ್ಲಿ ಕಾಯಕಯೋಗಿ ಫೌಂಡೇಶನ್, ಸಿದ್ಧಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಸಿದ್ದಗಂಗಾಶ್ರೀ ಸೇವಾ ಸಮಿತಿ ಸಹಯೋಗದಲ್ಲಿ ಶುಕ್ರವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಮತ್ತು ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿ ಅವರು ಅಕ್ಷರ ಜ್ಞಾನವಲ್ಲದೆ, ಹಸಿದವರಿಗೆ ಅನ್ನ ನೀಡಿದ ದೇವಮಾನವರಾಗಿದ್ದಾರೆ. ಒಬ್ಬ ಮನುಷ್ಯನನ್ನು ಬದುಕಿದ್ದಾಗಲೇ ನಡೆದಾಡುವ ದೇವರು ಎಂದು ಕೋಟ್ಯಂತರ ಜನ ಪೂಜಿಸುತ್ತಾರೆ ಎಂದರೆ ಅವರ ಸೇವಾಕಾರ್ಯ ಎಷ್ಟೊಂದು ಅಮರವಾಗಿದೆ ಎಂಬುದಕ್ಕೆ ಸಾಕ್ಷಿಗುಡ್ಡೆ ಸಿಗುತ್ತದೆ ಎಂದು ಶ್ಲಾಘಿಸಿದರು. ಸ್ವಾಮೀಜಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ಪ್ರಶಸ್ತಿ ನೀಡಿ ಕರುನಾಡಿನ ಮಠಾಧೀಶರ ಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ವಿಶ್ವಗುರು ಬಸವಣ್ಣನ ಮಾದರಿಯಲ್ಲಿ ಸಮಾನತೆಯ ತತ್ವ ಎತ್ತಿಹಿಡಿದು ಎಲ್ಲಾ ಮಠಾಧೀಶರಿಗೂ ಮಾದರಿಯಾದ ಶಿವಕುಮಾರ ಸ್ವಾಮೀಜಿ ದೇಶದ ಮಹಾ ಸಂತರು ಎಂದರು.

ಪತ್ರಕರ್ತ ಎಲ್.ಬಸವೇಗೌಡ ಉದ್ಘಾಟಿಸಿ ಮಾತನಾಡಿ , ಸಿದ್ಧಗಂಗಾಶ್ರೀಗಳ ಶುಭನಾಮದಲ್ಲಿ ಉದ್ಯಾನವನ್ನು ನಿರ್ಮಾಣ ಮಾಡಿರುವುದು ಮಂಡ್ಯಕ್ಕೆ ಕಳಸಪ್ರಾಯವಾಗಿದೆ ಎಂದು ಶ್ಲಾಘಿಸಿದರು. ನಗರಸಭೆ ಮಾಜಿ ಸದಸ್ಯ ಅಮ್ಜದ್ಪಾಷಾ ಮಾತನಾಡಿದರು.

ಸಮಾಜ ಸೇವಕಮಲ್ಲಿಕಾರ್ಜುನಯ್ಯ ಮತ್ತು ನಂಜಮ್ಮಣ್ಣಿ ದಂಪತಿಗೆ ‘ದಾಸೋಹಸಿರಿ’ ಪ್ರಶಸ್ತಿ ಹಾಗೂವಚನ ಪ್ರಚಾರಕ ಗಾಯಕ ಬಿಡದಿ ರೇಣುಕಪ್ಪ ಅವರಿಗೆ ‘ಕಾಯಕಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.

ಮುಖಂಡರಾದ ದೊಡ್ಡಯ್ಯ, ಎಂ.ಎಸ್.ಮಂಜುನಾಥ್, ಮಲ್ಲಿಕಾರ್ಜುನಪ್ಪ, ಮೆಣಸಗೆರೆ ಶಿವಲಿಂಗಯ್ಯ ಎಚ್.ಆರ್.ಕನ್ನಿಕಾ, ಬಿ.ಎಸ್.ಅನುಪಮಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-40-789803989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.