ಮಂಗಳೂರು: ‘ಭಗವದ್ಗೀತೆ ಮನುಜ ಕುಲಕ್ಕೆ ಮಾರ್ಗದರ್ಶಕ ಗ್ರಂಥ. ನಾವು ಬದುಕಿನಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ. ಗೀತೆಯ ಸಂದೇಶದಂತೆ ನಡೆದರೆ ಜೀವನ ಸಾರ್ಥಕ ವಾಗುವುತ್ತದೆ’ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂ ದ್ರತೀರ್ಥ ಸ್ವಾಮೀಜಿ ಹೇಳಿದರು.

ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ‘ಗೀತಾ ದಿಗ್ವಿಜಯ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ದೇಶದಲ್ಲಿ ಬಡತನ ಕಡಿಮೆಯಾದರೂ, ಬೌದ್ಧಿಕ ದಾರಿದ್ರ್ಯ ಹೆಚ್ಚಾಗುತ್ತಿದೆ. ಗೀತೆಯ ಸಂದೇಶ ಪ್ರತಿಯೊಬ್ಬರಿಗೂ ದೊರೆತಾಗ ಆಂತರಿಕ ಶ್ರೀಮಂತಿಕೆ ಪ್ರಾಪ್ತವಾಗುತ್ತದೆ. ಗೀತೆಯಲ್ಲಿ ಸಾರ್ವಕಾಲಿಕ ಸತ್ಯದ ಸಂದೇಶಗಳಿವೆ, ಅದನ್ನು ವಿಶ್ವಕ್ಕೆ ಪಸರಿಸಬೇಕೆಂಬ ಉದ್ದೇಶದಿಂದ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಆರಂಭಿಸಲಾಯಿತು. ಮುಂದಿನ ಪರ್ಯಾಯದವರೆಗೂ ಇದು ಮುಂದು ವರಿಯಲಿದೆ’ ಎಂದು ಹೇಳಿದರು.

ಭಗವದ್ಗೀತೆ ಕಲಿಸುವ ಗುರುಗಳಾದ ಸುಜಾತಾ ಪಿ., ವಸುಂಧರಾ ಉಪಾಧ್ಯಾಯ, ಹಾಗೂ ಬಿ. ವಿದ್ಯಾ ರಾವ್ ಅವರಿಗೆ ‘ಕಲ್ಕೂರ ಭಗವದ್ಗೀತಾ ಸಿರಿ’ ಪುರಸ್ಕಾರ, ಭಗವದ್ಗೀತೆ ಕಂಠಪಾಠ ಮಾಡುವ ಮಿಥಿಲ ಕೃಷ್ಣ ಭಟ್ ಮತ್ತು ಪ್ರಾಂಶು ನಾವಡ ಅವರಿಗೆ ‘ಕಲ್ಕೂರ ಭಗವದ್ಗೀತಾ ಯುವ ಸಿರಿ’ ಪುರಸ್ಕಾರ ನೀಡಲಾಯಿತು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ ಪುರಾಣಿಕ್, ಗಣ್ಯರಾದ ಎಸ್.ಎ. ಪ್ರಭಾಕರ ಶರ್ಮಾ, ವಿದ್ವಾಂಸ ಎಂ. ಪ್ರಭಾಕರ ಜೋಶಿ, ವಕೀಲರ ಸಂಘದ ಅಧ್ಯಕ್ಷ ಎಚ್.ವಿ ರಾಘವೇಂದ್ರ, ವಿದ್ವಾಂಸ ವೇ.ಮೂ ಪ್ರಭಾಕರ ಅಡಿಗ ಕದ್ರಿ, ಪೊಳಲಿ ನಿತ್ಯಾನಂದ ಕಾರಂತ, ಪ್ರೊ. ಜಿ.ಕೆ ಭಟ್ ಸೇರಾಜೆ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ಶಿವಪ್ರಸಾದ್ ಪ್ರಭು, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಶಶಿಪ್ರಭಾ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-29-1804950768

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.