ಮಂಗಳೂರು: ನಗರದ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದಾಸ ಸಂಕೀರ್ತನ ಮತ್ತು ಕುಣಿತ ಭಜನೆ ಸ್ಪರ್ಧೆ ಈಚೆಗೆ ಆಯೋಜಿಸಲಾಯಿತು.

ಸಂದೇಶ ನೀಡಿದ ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ದಾಸ ಸಂಕೀರ್ತನೆ ಮತ್ತು ಭಜನೆ ಕೇವಲ ಸಂಗೀತವಲ್ಲ, ಆತ್ಮಶುದ್ಧಿ ಮತ್ತು ಮಾನಸಿಕ ನೆಮ್ಮದಿ ಒದಗಿಸುವ ಸಾಧನಗಳು ಎಂದರು.

ವೇಗದ ಜೀವನದಲ್ಲಿ ಮಾನವನಿಗೆ ಒಳಗಿನ ಶಾಂತಿ ಅತ್ಯಗತ್ಯ. ಭಗವಂತನ ಸ್ಮರಣೆ ಮಾಡುವುದರಿಂದ ಮನಸ್ಸನ್ನು ಏಕಾಗ್ರಗೊಳಿಸಬಹುದಾಗಿದೆ. ಆಧ್ಯಾತ್ಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಧವ ಎಂ. ಅಂಚನ್ ಮತ್ತು ವಿಜಯ ಎನ್. ಕುಕ್ಯಾನ್ ಮುಖ್ಯ ಅತಿಥಿಯಾಗಿದ್ದರು. ತೀರ್ಪುಗಾರರಾಗಿ ಹಂಪಿ ಕನ್ನಡ ವಿವಿಯ ಸಂಶೋಧಕಿ ರತಿ ಪಾಲ್ಗೊಂಡಿದ್ದರು. ಬೈಕಂಪಾಡಿಯ ಶೇಷಶಯನ ಕುಣಿತ ಭಜನಾ ಮಂಡಳಿ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನ ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ಪಾಲಾಯಿತು. ತೃತೀಯ ಸ್ಥಾನ ಬ್ರಹ್ಮಶ್ರೀ ನಾರಾಯಣ ತಂಡ ಪಡೆದುಕೊಂಡಿತು.

ಅಂಜನೇಯ ದೇವಸ್ಥಾನ ಕುಣಿತ ಭಜನಾ ಮಂಡಳಿ, ಬ್ರಹ್ಮಲಿಂಗೇಶ್ವರ ಕುಣಿತ ಭಜನಾ ಮಂಡಳಿ, ವಿಠಲ ರುಕ್ಮಾಯಿ ಕುಣಿತ ಭಜನಾ ಮಂಡಳಿ, ಶ್ರೀ ಮಲ್ಲಿಕಾರ್ಜುನ ಕುಣಿತ ಭಜನಾ ಮಂಡಳಿ, ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿ, ನಂದಗೋಕುಲ ಕುಣಿತ ಭಜನಾ ತಂಡ ಪಾಲ್ಗೊಂಡಿತ್ತು. ಬ್ರಹ್ಮಕುಮಾರಿ ಜಯ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-29-247530230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.