ಮಂಗಳೂರು: ಕಳವಾರು ಪೇಜಾವರ ಸಂತ ಜೋಸೆಫರ ದೇವಾಲಯದಲ್ಲಿ ಎರಡೂವರೆ ಶತಮಾನಗಳ ಹಿಂದೆ ಆರಂಭವಾದ ಶಿಲುಬೆಯ ಯಾತ್ರೆಯು ಈ ಬಾರಿ ಮಾ.31ರಂದು ನಡೆಯಲಿದೆ ಎಂದು ಚರ್ಚ್ನ ಪ್ರಧಾನ ಧರ್ಮಗುರು ಫಾ. ರೊನಾಲ್ಡ್ ಡಿಸೋಜ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನದ ನಿರ್ದೇಶಕ ಫಾ. ಕ್ಲಿಫರ್ಡ್ ಫರ್ನಾಂಡಿಸ್ ನೇತೃತ್ವದಲ್ಲಿ ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಪ್ರಾರ್ಥನೆ, ಸ್ತುತಿ ಆರಾಧನೆ, 3 ಗಂಟೆಗೆ ಭಕ್ತಿ ಆಚರಣೆ, ಪವಿತ್ರ ಪ್ರಸಾದದ ಆರಾಧನೆ, ಸಂಜೆ 5ಕ್ಕೆ ಪವಿತ್ರ ಬಲಿಪೂಜೆ, 6 ಗಂಟೆಗೆ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟ ಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಶಿಲುಬೆಯ ಹಾದಿ ನಡೆಯಲಿದೆ. ನಂತರ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಆಶೀರ್ವಚನ ನೀಡುವರು. ರಾತ್ರಿ 9ಕ್ಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದರು.

ಫಾ. ರೂಡಾಲ್ಫ್ ರವಿ ಡೇಸಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಕ್ಲಿಂಟನ್ ಡಿಸೋಜ, ಸಿಲ್ವಿಯಾ ಪೇರಿಸ್, ವಾಲ್ಟರ್ ಮೊಂತೆರೊ, ಎಲಿಯಾಸ್ ಫರ್ನಾಂಡಿಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-29-1581328927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.