ಮಂಗಳೂರು: ಸಹೋದರತ್ವ, ದಾಂಪತ್ಯ ಸೇರಿದಂತೆ ಕುಟುಂಬ ಜೀವನದ ಮೌಲ್ಯಗಳನ್ನು ತೋರಿಸಿಕೊಟ್ಟ ಮಹಾಭಾರತ ಮತ್ತು ರಾಮಾಯಣ ಇಂದಿನ ಸಾಮಾಜಿಕ ಸಂದರ್ಭದಲ್ಲಿ ಹೆಚ್ಚು ಪರಿಣಾಮಕಾರಿ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಉಪಾಧ್ಯಕ್ಷ ಟಿಎಪಿ ಶೆಣೈ ಅಭಿಪ್ರಾಯಪಟ್ಟರು.

ವಿಶ್ವ ಹಿಂದೂ ಪರಿಷತ್ ಮಂಗಳೂರು ಘಟಕ ಮತ್ತು ರಾಮೋತ್ಸವ ಸಮಿತಿ ನಗರದ ಕದ್ರಿ ಮೈದಾನದಲ್ಲಿ ಆಯೋಜಿಸಿದ್ದ 25ನೇ ವರ್ಷದ ರಾಮೋತ್ಸವದ ಕೊನೆಯ ದಿನವಾದ ಭಾನುವಾರ ನಡೆದ ‘ದೃಢನಾರಿ, ಸದೃಢ ಭಾರತ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪುರಾಣ ಎಂದಿಗೂ ಇತಿಹಾಸ ಆಗುವುದಿಲ್ಲ. ಆದರೆ ಮಹಾಭಾರತದಂಥ ಕಥೆಗಳನ್ನು ಇತಿಹಾಸದ ಪರಿಕಲ್ಪನೆಯಲ್ಲಿ ನೋಡದೇ ಇರಲು ಸಾಧ್ಯವಿಲ್ಲ’ ಎಂದ ಅವರು ‘ಪತಿ ಅಂಧ ಎಂದು ತಿಳಿದ ಕೂಡಲೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾದ ಗಾಂಧಾರಿ ಆದರ್ಶವಾದರೂ ಅದರಿಂದ ಅನಾಹುತಗಳು ಸಂಭವಿಸಿದವು. ತಂದೆ ಮತ್ತು ತಾಯಿ ಇಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳದೇ ಇರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದರು.

‘ಯಕ್ಷನ ಪ್ರಶ್ನೆ ಮತ್ತು ಧರ್ಮರಾಯನ ಉತ್ತರದಲ್ಲಿ ತಾಯಿ–ತಂದೆಯ ಘನತೆ, ಅಣ್ಣ–ತಮ್ಮನ ಪ್ರೀತಿ, ಪತ್ನಿಯ ತ್ಯಾಗ ಇತ್ಯಾದಿಗಳನ್ನು ತೋರಿಸಿಕೊಟ್ಟ ನೆಲ ಭಾರತ ಮತ್ತು ಗ್ರಂಥ ಮಹಾಭಾರತ. ಕೌಟುಂಬಿಕ ದೌರ್ಬಲ್ಯಗಳನ್ನು ಒಪ್ಪಿಕೊಂಡು ಮುಂದೆ ಸಾಗಿದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂಬುದನ್ನೂ ಮಹಾಭಾರತ ತೋರಿಸಿಕೊಟ್ಟಿದೆ. ಭರತನಿಗೆ ಬೇಸರ ಆಗಬಾರದು ಎಂದು ಆಟದಲ್ಲಿ ಸೋಲೊಪ್ಪಿಕೊಳ್ಳುತ್ತಿದ್ದ ರಾಮ ಅಣ್ಣನ ಅಪ್ರತಿಮ ಪ್ರೀತಿ ಮತ್ತು ಕಾಳಜಿಗೆ ಉದಾಹರಣೆ. ರಾಮ ಕಾಡಿಗೆ ಹೋಗುತ್ತಿರುವುದು ಗೊತ್ತಾದಾಗ ನವಜಾತ ಶಿಶುವಿಗೆ ಹಾಲು ಕೊಡುವುದನ್ನೇ ಬಿಟ್ಟ ಪ್ರಜೆ ಆಳುವವರ ಮೇಲಿನ ಗೌರವದ ಪ್ರತೀಕ’ ಎಂದು ಟಿಎಪಿ ಶೆಣೈ ನುಡಿದರು.

‘ರಾಮಾಯಣದಲ್ಲಿ ಅಗಸ ಆಡಿದ ಮಾತುಗಳಿಗೆ ಸಂಬಂಧಿಸಿದ ಕಥೆ ಎಂಬುದೊಂದು ಇಲ್ಲ. ನಾಡಿನಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿಯಲು ಭದ್ರ ಮತ್ತು ಕರಣ ಎಂಬಿಬ್ಬರು ಗೂಢಚರರನ್ನು ರಾಮ ಕಳಹಿಸುತ್ತಿದ್ದ. ಅವರು ಕೊಟ್ಟ ವದರಿ ಆಧಾರಲ್ಲಿ ಸೀತೆಯಿಂದ ದೂರವಾಗಲು ಬಯಸಿದ್ದ. ಸಮಾಜದಲ್ಲಿ ಅಸಂಬದ್ಧ, ಬೇಜವಾಬ್ದಾರಿಯ ಮಾತುಗಳನ್ನು ಆಡುವುದು ನಿಲ್ಲಬೇಕು. ಇಲ್ಲವಾದರೆ ಅದು ಆಡಳಿತವನ್ನೇ ಬುಡಮೇಲು ಮಾಡಬಹುದು ಎಂಬ ಎಚ್ಚರಿಕೆಯೇ ಈ ನಿರ್ಧಾರಕ್ಕೆ ಕಾರಣ’ ಎಂದು ಅವರು ಹೇಳಿದರು.

ಮಾತೃಶಕ್ತಿ ಪ್ರಾಂತ ಸಹಪ್ರಮುಖ್ ಸುರೇಖಾ ರಾಜ್ ಪಾಲ್ಗೊಂಡಿದ್ದರು. ವಕೀಲೆ ಹಾಗೂ ರಾಮೋತ್ಸವದ ಕಾರ್ಯದರ್ಶಿ ಆಶಾ ಡಿ.ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕೀಲಾ ಕಾವ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-29-766851370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.