ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ ಭವಿಷ್ಯ: 2021ರ ಏಪ್ರಿಲ್ 1ರಿಂದ 30ರವರೆಗೆ

Last Updated 4 ಏಪ್ರಿಲ್ 2021, 0:55 IST
ಅಕ್ಷರ ಗಾತ್ರ

ಮೇಷ:

ನಿಮ್ಮ ಪ್ರಯತ್ನಗಳಿಂದ ಪ್ರಗತಿ ಸಾಧಿಸಲು ಬಯಸುತ್ತೀರಿ. ಯಾವುದೇ ಕೆಲಸವನ್ನು ಧೈರ್ಯದಿಂದ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಶುಭ: 12, 16, 24,

ಅಶುಭ: 09, 13, 27

ವೃಷಭ

ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಗಳಿಸುವಿರಿ. ನಿಮ್ಮ ವರ್ತನೆ ಹೆಚ್ಚು ಪ್ರಶಂಸೆಗೆ ಒಳಪಡುವುದು. ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ಪರಿವಾರದವರಿಂದ ಸಂತಸ, ನೆಮ್ಮದಿ.

ಶುಭ: 11, 17, 26

ಅಶುಭ: 10, 18, 24

ಮಿಥುನ

ನಿಮ್ಮ ಬುದ್ಧಿಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತೀರಿ.ಹಿರಿಯ ಅಧಿಕಾರಿಯಿಂದ ಬೆಂಬಲವಿದೆ.

ಶುಭ: 13, 16, 21

ಅಶುಭ: 10, 18, 22

ಕಟಕ

ನಿಮ್ಮ ಬುದ್ಧಿಬಲದಿಂದ ಪದೋನ್ನತಿ ಸಿಗುವುದು. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸುವಿರಿ. ವಿರೋಧಿಗಳ ಟೀಕೆಗಳಿಗೆ ಕಿವಿಗೊಡದಿರಿ. ಆರ್ಥಿಕ ಸ್ಥಿತಿ ಉತ್ತಮ. ಉದ್ಯಮಿಗಳಿಗೆ ತಕ್ಷಣವೇ ಲಾಭ ದೊರಕದಿದ್ದರೂ ಸ್ಥಿರವಾಗಿ ಬರುತ್ತದೆ.

ಶುಭ: 13, 18, 22

ಅಶುಭ: 17, 24, 27

ಸಿಂಹ

ಮಕ್ಕಳಿಂದ ಸಂತಸ. ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲ. ನಿಮ್ಮ ಪ್ರಯತ್ನಕ್ಕೆ ಪುರಸ್ಕಾರವನ್ನೂ ಪಡೆಯುತ್ತೀರಿ. ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ. ನಿಮ್ಮ ಕೆಲಸಕ್ಕೆ ಇತರರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ. ಶುಭ: 12, 20, 26 ಅಶುಭ: 04, 09, 11

ಕನ್ಯಾ

ಮೇಲಧಿಕಾರಿಗಳ ಸಹಾಯದಿಂದ ಮತ್ತು ಬುದ್ಧಿಕೌಶಲ್ಯದಿಂದ ದೊಡ್ಡ ಯೋಜನೆಯೊಂದನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಇದರಿಂದ ಪ್ರಶಂಸೆ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಸಂಭವ.

ಶುಭ: 06, 15, 26

ಅಶುಭ: 11, 23, 29

ತುಲಾ

ಟೀಕಿಸುವ ಜನರ ಬಗ್ಗೆ ಆತಂಕ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತ ಇರುವ ಜನರ ಬಗ್ಗೆ ಎಚ್ಚರದಿಂದಿರಿ. ನಿಮ್ಮನ್ನು ಅಡ್ಡದಾರಿಗೆ ಎಳೆಯುವವರ ಬಗ್ಗೆ ತಿಳಿದುಕೊಳ್ಳಿ. ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಬಹುದು.

ಶುಭ: 10, 19, 26

ಅಶುಭ: 12, 24, 27

ವೃಶ್ಚಿಕ

ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಎಲ್ಲಾ ಕಾಲದಲ್ಲೂ ಲಾಭವೇ ಆಗುತ್ತದೆ ಎಂದಲ್ಲ. ಮುಷ್ಟಿ ಕಾಳು ಚೆಲ್ಲಿ ಮೂಟೆ ಕಾಳನ್ನು ಪಡೆಯುವಂತೆ ನಿಮ್ಮ ಹಣ ಖರ್ಚಾಗುವುದು. ಚಿಂತಿಸಬೇಡಿ.

ಶುಭ: 03, 06, 07

ಅಶುಭ: 12, 15, 29

ಧನು

ಮಾತು ಬಲ್ಲವನಿಗೆ ಜಗಳವಿಲ್ಲ. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಯಾರನ್ನೂ ತಕ್ಷಣಕ್ಕೆ ತೀರ್ಮಾನಿಸಬೇಡಿ. ಆರೋಗ್ಯದ ಕಡೆ ಗಮನ ಇರಲಿ.

ಶುಭ: 13, 17, 19

ಅಶುಭ: 12, 16, 29

ಮಕರ

ಕೆಲಸದ ನಿಮಿತ್ತ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಮಾನ ಸನ್ಮಾನದ ಯೋಗ. ತಿಂಗಳಾಂತ್ಯಕ್ಕೆ ಅನಾರೋಗ್ಯದಿಂದಾಗಿ ವೈದ್ಯಕೀಯ ಖರ್ಚು ಬರುವ ಸಾಧ್ಯತೆ ಇದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಶುಭ: 05, 15, 27

ಅಶುಭ: 10, 19, 23

ಕುಂಭ

ವಾಹನ ಚಲಾಯಿಸುವಾಗ ಎಚ್ಚರ. ಸಂಗಾತಿಯ ಜತೆ ವಾದವಿವಾದ ಮಾಡಬೇಡಿ. ಕೌಟುಂಬಿಕ ಕಲಹ ಉಂಟಾಗುವ ಸಾಧ್ಯತೆ ಇದೆ. ಚಿಂತಿಸಬೇಡಿ, ತಿಂಗಳ ಕೊನೆಗೆ ಕುಟುಂಬದಲ್ಲಿ ಸಂತಸ ಮೂಡಲಿದೆ.

ಶುಭ: 10, 15, 23

ಅಶುಭ: 12, 18, 25

ಮೀನ

ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ನಿರ್ವಹಣೆಯ ಸಾಮರ್ಥ್ಯ‌ಕ್ಕೆ ಮೆಚ್ಚುಗೆ ವ್ಯಕ್ತವಾಗುವುದು. ಕಲಾವಿದರಿಗೆ ದೊಡ್ಡ ಯಶಸ್ಸು. ಪ್ರೇಮಿಗಳಿಗೆ ವಿವಾಹ ಭಾಗ್ಯ. ದೂರ ಪ್ರಯಾಣದ ಅನಿರೀಕ್ಷಿತ ಯೋಗವಿದೆ.

ಶುಭ: 12, 18, 28

ಅಶುಭ: 10, 16, 24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT