ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ ಭವಿಷ್ಯ: 2023ರ ಜನವರಿ 1 ರಿಂದ 31ರ ವರೆಗೆ

Last Updated 1 ಜನವರಿ 2023, 9:28 IST
ಅಕ್ಷರ ಗಾತ್ರ

ಮೇಷ: ಹೊಸ ವರ್ಷದ ಆರಂಭ ಸಂತಸದಿಂದ ಕೂಡಿರುತ್ತದೆ. ಜೀವನದ ಹಲವು ಆಯಾಮಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ನೌಕರಿಯಲ್ಲಿ ಪದೋನ್ನತಿ, ವ್ಯಾಪಾರ ಉದ್ಯಮದಲ್ಲಿ ಲಾಭ. ಆದರೆ, ಸಿಟ್ಟಿನಲ್ಲಿ ದುಡುಕಿ ಮಾತಾಡಬೇಡಿ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಶುಭ: 13, 22, 27 ಅಶುಭ: 4, 8, 20.

ವೃಷಭ: ಈ ಮಾಸ ಸಾಕಷ್ಟು ಅಚ್ಚರಿಗಳನ್ನು ನೀಡಲಿದೆ. ಇದರ ಜೊತೆಗೆ, ಜವಾಬ್ದಾರಿ, ಒತ್ತಡಗಳು ಸಹ ಹೆಗಲೇರಬಹುದು. ತಾಳ್ಮೆಯಿಂದ ನಿರ್ವಹಿಸಿದಲ್ಲಿ ಇವೆಲ್ಲಾ ಮುಂದಿನ ಯಶಸ್ಸಿಗೆ ಮೆಟ್ಟಿಲುಗಳಾಗಲಿವೆ. ಇತರರ ಭಾವನೆಗಳನ್ನು ನೋಯಿಸಬೇಡಿ. ಆರೋಗ್ಯವನ್ನು ಕಡೆಗಣಿಸಬೇಡಿ. ಶುಭ: 2, 7, 18 ಅಶುಭ: 21, 27, 29.

ಮಿಥುನ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಲವು ದಿನಗಳಿಂದ ಬಾಕಿ ಇದ್ದ ಹಣ ಕೈಸೇರಲಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಉದ್ಯೋಗ–ವ್ಯವಹಾರದ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಯೋಚಿಸಿ ಲಾಭದಾಯಕ ಅವಕಾಶಗಳನ್ನು ಆಯ್ದುಕೊಳ್ಳಿ. ಶುಭ: 9, 18, 26 ಅಶುಭ: 12, 21, 28.

ಕರ್ಕ: ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್‌ ಚಾತುರ್ಯದಿಂದ ಜನರನ್ನು ಗೆಲ್ಲುವಿರಿ. ಹೊಸ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಉಂಟಾಗುತ್ತದೆ. ದುಷ್ಟ ಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ. ಶುಭ 6, 8, 9 ಅಶುಭ 3, 5, 7.

ಸಿಂಹ: ಬಹಳ ದಿನಗಳಿಂದ ಕಂಡಿದ್ದ ಕನಸೊಂದು ನನಸಾಗುವ ಸೂಚನೆ ಇದೆ. ಮನೆ, ಆಸ್ತಿ ಖರೀದಿಗೆ ಉತ್ತಮ ಸಮಯ. ಅನೇಕ ಮೂಲಗಳಿಂದ ಹಣ ಹರಿದು ಬರಲಿದೆ. ಇತರರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ವಾಹನ ಚಲಾಯಿಸುವಾಗ ಎಚ್ಚರವಹಿಸಿ. ಶುಭ: 14, 20, 25 ಅಶುಭ: 10, 18, 22.

ಕನ್ಯಾ: ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಅನಿರೀಕ್ಷಿತ ಧನಾಗಮನ. ನಿಮ್ಮ ಸಮಯವನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಿ. ಮಕ್ಕಳ ಶೈಕ್ಷಣಿಕ ಪ್ರಗತಿಯಿಂದ ನೆಮ್ಮದಿ. ಭೂಮಿ ಖರೀದಿ ಅಥವಾ ಆಸ್ತಿ ಬರುವ ಯೋಗವಿದೆ. ಶುಭ: 12, 18, 28 ಅಶುಭ: 11, 16, 29.

ತುಲಾ: ಆರಂಭದಲ್ಲಿ ಯಾವುದೂ ನಿಮ್ಮೆಣಿಕೆಯಂತೆ ನಡೆಯುತ್ತಿಲ್ಲ ಎನಿಸಿದರೂ ಕ್ರಮೇಣ ಎಲ್ಲವೂ ನಿಮ್ಮ ನಿರೀಕ್ಷೆಯಂತೆಯೇ ಸಾಗುವುದು. ನೀವು ಅಂದುಕೊಂಡಿರದ ಮೂಲದಿಂದ ಅನುಕೂಲ ಹಾಗೂ ಧನಾಗಮನ ಕಂಡುಬರಲಿದೆ. ಇತರರ ಸಮಸ್ಯೆಗಳಿಗೆ ಮಿಡಿಯುವಿರಿ. ಶುಭ: 14, 18, 22 ಅಶುಭ: 16, 23, 29.

ವೃಶ್ಚಿಕ: ತಿಂಗಳ ಮೊದಲ ದಿನದಿಂದಲೇ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ. ಆದ್ಯತೆಯ ಆಧಾರದ ಮೇಲೆ ಕೆಲಸಗಳನ್ನು ಹೊಂದಿಸಿಕೊಳ್ಳುವಿರಿ. ಸಣ್ಣಪುಟ್ಟ ತಿರುಗಾಟಗಳು, ಪ್ರವಾಸಗಳು ನಿಮ್ಮ ಚೈತನ್ಯವನ್ನು ಹೆಚ್ಚಿಸಲಿವೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಶುಭ: 9, 16, 22 ಅಶುಭ: 11, 15, 23.

ಧನು: ಸವಾಲುಗಳನ್ನು ಎದುರಿಸಲು ಸಾಕಷ್ಟು ತಾಳ್ಮೆ ಹಾಗೂ ಏಕಾಗ್ರತೆಯ ಅವಶ್ಯಕತೆ ಇದೆ ಎನ್ನುವುದನ್ನು ಮರೆಯಬೇಡಿ. ತಿಂಗಳ ಕೊನೆಯಲ್ಲಿ ಹಣಕಾಸಿನ ಹರಿವು ನೆಮ್ಮದಿ ತರಲಿದೆ. ಸಾಹಿತ್ಯ, ಸಂಗೀತ ಶಾಸ್ತ್ರಜ್ಞರಿಗೆ ಗೌರವ ಸಿಗುತ್ತದೆ. ಉದ್ಯೋಗದಲ್ಲಿ ಮಾನಸಿಕ ಕಿರಿಕಿರಿ ಇರುವುದು. ಶುಭ: 9, 16, 22 ಅಶುಭ: 11, 15, 23.

ಮಕರ: ಹಣಕಾಸು ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ನಡೆಸಿ. ಖರ್ಚು ಹೆಚ್ಚಾಗಬಹುದು. ನಿಮ್ಮ ಇಚ್ಚೆಯಂತೆ ನಡೆಯಲು ಅಡೆತಡೆ ಬರಬಹುದು. ಆಪ್ತ ಮಿತ್ರರು ಮನೆಗೆ ಬೇಟಿ ನೀಡುತ್ತಾರೆ. ಉದ್ಯಮಿಗಳಿಗೆ ಹೆಚ್ಚು ಅನುಕೂಲ. ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಿನ್ನಡೆ. ಶುಭ: 11, 14, 25 ಅಶುಭ: 13, 26, 29.

ಕುಂಭ: ಕೃಷಿಕರಿಗೆ ಲಾಭ. ಆಕಸ್ಮಿಕ ಭೂಮಿ ಖರೀದಿ ಯೋಗವಿದೆ. ಹಣಕಾಸು ಸಂಸ್ಥೆಯನ್ನು ಹೊಂದಿರುವವರಿಗೆ ಉತ್ತಮ ಲಾಭ. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಭಡ್ತಿ ಯೋಗವಿದೆ. ಸಂಧಿವಾತ ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಶುಭ. ಶುಭ: 14, 19, 22 ಅಶುಭ: 12, 23, 26.

ಮೀನ: ಸಮಾಜದಲ್ಲಿ ಗೌರವಾದರಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಕೆಲವರು ಆಪ್ತಮಿತ್ರರಂತೆ ನಟಿಸಿ ಮೋಸ ಮಾಡಬಹುದು, ಎಚ್ಚರಿಕೆಯಿಂದ ಇರಿ. ಶೇರು ವ್ಯವಹಾರದಲ್ಲಿ ಉತ್ತಮ ಲಾಭ. ವಾಹನ ಖರೀದಿ ಯೋಗವಿದೆ. ಕುಟುಂಬದ ಜೊತೆ ಚಿಕ್ಕ ಪ್ರವಾಸ ಮಾಡುವಿರಿ. ಶುಭ: 14, 20, 28 ಅಶುಭ: 18, 23, 29.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT