ಮೂಡುಬಿದಿರೆ: ಧರ್ಮವೇ ನಮ್ಮ ಜೀವನ ಪಯಣದ ರಾಜರಸ್ತೆಯಾಗಿದ್ದು, ತ್ಯಾಗ ಮನೋಭಾವದಿಂದ ನೆಮ್ಮದಿಯನ್ನು ಮರಳಿ ಪಡೆಯಲು ಸಾಧ್ಯ. ದ್ವೇಷ ದೂರವಿಟ್ಟು ಪರಸ್ಪರ ಪ್ರೀತಿಯಿಂದ ಜೀವಿಸುವುದೇ ನಿಜವಾದ ಬ್ರಹ್ಮಕಲಶೋತ್ಸವವಾಗಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಹೊಸಂಗಡಿ ಮಾರೂರು ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ದೇವರ ಪುನಃ ಪ್ರತಿಷ್ಠೆಯಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.

ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಮಾತನಾಡಿ, ತ್ಯಾಗ ಮನೋಭಾವದಿಂದ ದಾನಮಾಡಿ ಆರಾಧನಾ ಕ್ಷೇತ್ರಗಳನ್ನು ನವೀಕರಿಸುವುದೇ ಭಗವಂತನಿಗೆ ಪ್ರಿಯವಾದ ಕಾರ್ಯ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿರು.

ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಗೌರವಾಧ್ಯಕ್ಷ ಇರುವೈಲು ದೊಡ್ಡಗುತ್ತು ಭುಜಂಗ ಆರ್.ಶೆಟ್ಟಿ ಮಾತನಾಡಿ, ಹೊಸಂಗಡಿ ಕ್ಷೇತ್ರವು ರಾಜಮಾರ್ಗದ ಸಮೀಪದಲ್ಲಿರುವ ಕಾರಣ ದೊಡ್ಡ ಕ್ಷೇತ್ರವಾಗಿ ಬೆಳೆಯುವ ಸಾಧ್ಯತೆಯಿದ್ದು, ಕ್ಷೇತ್ರದ ಆಡಳಿತ ಈ ಬಗ್ಗೆ ಗಮನಹರಿಸಿ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ವೈಬ್ರೆಂಟ್ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ನಾಯಕ್, ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ಮಾರೂರುಗುತ್ತು ಭೋಜ ಎನ್.ಶೆಟ್ಟಿ, ಪೆರಿಂಜೆ ಮದಕುಡೆ ದಿನಕರ ಶೆಟ್ಟಿ, ಮುಂಬೈ ವಿಶ್ವಾಸ್ ಕೆಮಿಕಲ್ನ ವಿವೇಕ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ.ಜೀವಂಧರ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್, ಕಾರ್ಯಾಧ್ಯಕ್ಷ ಮಾರೂರುಗುತ್ತು ಶಂಭು ಎನ್.ಶೆಟ್ಟಿ, ಮಾರೂರು ಖಂಡಿಗರಾಮದಾಸ ಆಸ್ರಣ್ಣ ಭಾಗವಹಿಸಿದ್ದರು.

ಮುಂಬೈ ಸಮಿತಿಯ ಗೌರವಾಧ್ಯಕ್ಷ ಇರುವೈಲು ಭುಜಂಗ ಆರ್.ಶೆಟ್ಟಿ, ಅಧ್ಯಕ್ಷ ಭೋಜ ಎನ್.ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿ, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವಿಶ್ವಾಸ್ ಕೆಮಿಕಲ್ ಸಂಸ್ಥೆಯ ವಿವೇಕ್ ಶೆಟ್ಟಿ, ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾರೂರುಗುತ್ತು ವಿಶ್ವನಾಥ ಶೆಟ್ಟಿ, ಪೆರಿಂಜೆ ಮದಕುಡೆ ದಿನಕರ ಶೆಟ್ಟಿ, ವಿಮಲಾ ಸೇರಿಗಾರ್ತಿ, ರಮಣಿ ಅಣ್ಣಿ ಶೆಟ್ಟಿ, ಹೋಟೆಲ್ ಉದ್ಯಮಿ ಸದಾಶಿವ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ.ಶೆಟ್ಟಿ, ಉಪಾಧ್ಯಕ್ಷ ಮಿತ್ತಬೆಟ್ಟುಗುತ್ತು ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸುನಿಲ್ ಕುಮಾರ್ ಶೆಟ್ಟಿ , ರವಿರಾಜ್ ಪಾಂಡಿಬೆಟ್ಟು, ರವಿ ಪೂಜಾರಿ ಭಾಗವಹಿಸಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್ ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ ನಿರೂಪಿಸಿದರು. ಶಂಕರ್ ಎ. ಕೋಟ್ಯಾನ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-29-1759705036

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.