ಮೂಡಲಗಿ: ‘ಮನುಕುಲವನ್ನು ಪ್ರೀತಿಸುವುದೇ ನಿಜವಾದ ಧರ್ಮ. ಬುದ್ಧ, ಬಸವಣ್ಣನವರು ಇದನ್ನು ವಿಶ್ವಕ್ಕೆ ಸಾರಿದ್ದರು’ ಎಂದು ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಸತ್ಯಸಾಯಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೆಳದಿಂಗಳ ಸಾಹಿತ್ಯ ಚಿಂತನ– ಮಂಥನ ಸುವರ್ಣ ಸಂಚಿಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರೀತಿಯಿಂದ ಜಗತ್ತನ್ನು ಗೆಲ್ಲುವ ಮಾರ್ಗವನ್ನು ಸಂತರು, ಪ್ರವಾದಿಗಳು ತೋರಿಸಿಕೊಟ್ಟಿದ್ದರು. ವಿಶ್ವ ಪ್ರಜ್ಞೆಯೇ ಬುದ್ಧ, ಬಸವ ಪ್ರಜ್ಞೆಯಾಗಿದೆ’ ಎಂದರು.

ಸಾಹಿತಿ ವಿ.ಎಸ್. ಮಾಳಿ ಮಾತನಾಡಿ, ‘ಬುದ್ಧ– ಬಸವ ಸಮನ್ವಯವು ಮಾನವೀಯತೆ, ಸಮಾನತೆ ಮತ್ತು ಜ್ಞಾನಾಧಾರಿತ ಸಮಾಜ ನಡೆಸುವ ಸನ್ಮಾರ್ಗವಾಗಿತ್ತು. ವೈಚಾರಿಕ ನಿಲುವಿನಲ್ಲಿ ಬಸವಣ್ಣನವರು ಬುದ್ದನಗಿಂತ ಒಂದು ಹೆಜ್ಜೆ ಮುಂದೆ ಇದ್ದರು’ ಎಂದು ಪ್ರತಿಪಾದಿಸಿದರು.

‘ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಸೇರುವ ಮೂಲಕ ಬುದ್ಧನನ್ನು ಭಾರತದಲ್ಲಿ ಪ್ರಸ್ತುತವಾಗಿರಿಸಲು ಸಾಧ್ಯವಾಗಿದೆ’ ಎಂದರು.

ಬೆಳಗಾವಿಯ ಮಹಾನಗರ ಪಾಲಿಕೆ ಉಪ ಮೇಯರ್ ಹಣಮಂತ ಕೊಂಗಾಲಿ, ಕಾರ್ಮಿಕ ಇಲಾಖೆಯ ಕಲಬುರ್ಗಿ ವಿಭಾಗೀಯ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ, ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಮಾತನಾಡಿದರು.

ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಹಣಮಂತ ಸೋರಗಾಂವಿ ಅಧ್ಯಕ್ಷತೆ ವಹಿಸಿದ್ದರು. ಎ.ಎಲ್. ಶಿಂಧಿಹಟ್ಟಿ, ಎಸ್.ಎಂ. ಕಮದಾಳ, ಆರ್.ಟಿ. ಲಂಕೆಪ್ಪನ್ನವರ, ಬಾಲಶೇಖರ ಬಂದಿ, ಮಹಾವೀರ ಸಲ್ಲಾಗೋಳ, ಬಸವಂತ ತರಕಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-21-128937737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.