ಮುದ್ದೇಬಿಹಾಳ: ‘ಅಲೌಕಿಕ ಪವಾಡ ಪುರುಷರಾದ ಲಡ್ಡು ಮುತ್ಯಾ, ಸುಕುನಿ ತಾತ, ಹುಚ್ಚರಪ್ಪಜ್ಜ ಅಂತವರು ನಿಜ ಪವಾಡ ಪುರುಷರು. ಸ್ವಾಮೀಜಿಗಳು ಧರ್ಮ ಬೋಧಕರು ಮಾತ್ರ’ ಎಂದು ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಮಾರುತಿ ನಗರದಲ್ಲಿ ಇರುವ ಯಲ್ಲಾಲಿಂಗ ಮಹಾರಾಜರ ಮಠದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಸ್ವಾಮೀಜಿ ಆದವರು ಸಂಪತ್ತಿನ ಹಿಂದೆ ಹೋಗಬಾರದು. ಭಕ್ತರೆ ಅವರಿಗೆ ದೊಡ್ಡ ಸಂಪತ್ತು. ಶಿಕ್ಷಣ ಇರುವಲ್ಲಿ ಸಂಸ್ಕಾರ ಬೆಳೆಯುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ’ ಎಂದರು.

ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ‘ಈಗಾಗಲೇ ₹25 ಲಕ್ಷ ಅನುದಾನ ನೀಡಿದ್ದೇವೆ. ಇನ್ನೂ ₹25 ಲಕ್ಷ ಅನುದಾನ ನೀಡಲಾಗುವುದು. ಕಲ್ಯಾಣ ಮಂಟಪದ ಜೊತೆಗೆ ಶ್ರೀಗಳಿಗೆ ವಸತಿಗೆ ಮನೆ ನಿರ್ಮಾಣ ಮಾಡುವ ಯೋಜನೆ ಇದೆ. ಈ ಭಾಗದಲ್ಲಿ ಗುತ್ತಿಗೆದಾರರ ಕಾಟ ಹೆಚ್ಚಿದೆ ಎಂದರು.

‘ಹಣ ಇರುವವರು ಬಡವರಿಗೆ ನೀಡುವುದೇ ನಿಜವಾದ ದಾಸೋಹ. ಮಠಗಳು ನಿರ್ಮಾಣದಿಂದ ಧರ್ಮ ಸ್ಥಾಪನೆ ಆಗುತ್ತದೆ’ ಎಂದರು.

ವೈ.ಎಚ್.ವಿಜಯಕರ ಮಾತನಾಡಿ, ‘ಸರ್ವರ ಕಷ್ಟಗಳನ್ನು ಪರಿಹರಿಸಿಕೊಂಡು ಹೋಗಿ ಎನ್ನುವ ಪರಂಪರೆ ಮುಗಳಖೋಡ ಮಠದ್ದು, ಅಂತ ಮಠದ ಶಾಖೆಯ ಸಭಾಭವನ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸುತ್ತಿರುವುದು ಸಂತಸದ ವಿಷಯ’ ಎಂದರು.

ಗೋವಾ ರಾಜ್ಯದ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸದಾಶಿವ ಮಠ, ಮಹಿಬೂಬ ಗೊಳಸಂಗಿ, ಹುಸೇನ ಮುಲ್ಲಾ, ಸದಾನಂದ ಮಾಗಿ, ಸಮಿತಿಯ ಅಧ್ಯಕ್ಷ ಎಸ್.ಎಸ್.ಹುನಗುಂದ, ಎಸ್.ಕೆ.ಹರನಾಳ, ಸದ್ದಾಂ ಕುಂಟೋಜಿ, ರಫೀಕ ಶಿರೋಳ, ಯಲ್ಲಾಲಿಂಗ ಸಮಿತಿ ಪದಾಧಿಕಾರಿಗಳು, ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-26-768785301

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.