ಮುದ್ದೇಬಿಹಾಳ: ಯಜ್ಞ, ಯಾಗಾದಿ, ಅದ್ದೂರಿ, ಆಡಂಬರದ ಖರ್ಚುಗಳ ಮೂಲಕ ಜನಸಾಮಾನ್ಯರಿಗೆ ನಿಲುಕದ ಗಗನ ಕುಸುಮವಾಗಿದ್ದ ದೇವರ ಅಸ್ತಿತ್ವವನ್ನು 12ನೇ ಶತಮಾನದ ಬಸವಾದಿ ಶರಣರು ತಮ್ಮ ನಡೆ, ನುಡಿ, ವಚನಗಳ ಮೂಲಕ ಸರಳಗೊಳಿಸಿದರು ಎಂದು ಮಹಾಮನೆ ಬಳಗದ ಅಧ್ಯಕ್ಷರಾದ ಎಸ್.ಎ. ಬೇವಿನಗಿಡದ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ವಿಶ್ವಕರ್ಮ ಬಡಾವಣೆಯಲ್ಲಿರುವ ಮಹಾಬಲೇಶ್ವರ ಗಡೇದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ 1057 ನೇ ‘ಮಹಾಮನೆ’ ಕಾರ್ಯಕ್ರಮದಲ್ಲಿ ಶರಣ ಗುರುಪುರದ ಮಲ್ಲಯ್ಯನವರ ವಚನ ವಿಶ್ಲೇಷಿಸಿ ಮಾತನಾಡಿದರು.

‘12ನೇ ಶತಮಾನ ಕನ್ನಡದ ನೆಲದಲ್ಲಿ ಅಚ್ಚಳಿಯದ ತಿರುವು ಪಡೆದುಕೊಂಡ ಯುಗ. ಸಾಮಾಜಿಕ, ಧಾರ್ಮಿಕ ಚಿಂತನೆಗಳಿಗೆ ತಿರುವು ಕೊಟ್ಟ ಕಾಲವಿದು. ಶ್ರೀಮಂತರ ಸ್ವತ್ತಾಗಿದ್ದ ದೇವರು, ಆಚಾರ, ವಿಚಾರ, ಸಂಪ್ರದಾಯ, ಆಧ್ಯಾತ್ಮಿಕ ನೆಲೆಯನ್ನು ಶರಣರು ಬದಲಿಸಿದರು. ಏನೊಂದೂ ಓದದ ಜನ ಸಾಮಾನ್ಯರು, ಮಹಿಳೆಯರು ಶ್ರೇಷ್ಠ ಮಟ್ಟದ ವಚನಗಳನ್ನು ಬರೆದರು. ಬರೆದಂತೆಯೇ ತಮ್ಮ ಜೀವನ ರೂಪಿಸಿಕೊಂಡರು’ ಎಂದವರು ಹೇಳಿದರು. ‘ಕಾಯಕ ಯೋಗಿ’ ಪ್ರಶಸ್ತಿ ಪಡೆದ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಲಾಯಿತು.

ಶರಣಬಸಪ್ಪ ಗಡೇದ ಮಾತನಾಡಿದರು. ದಾನಪ್ಪ ನಾಗಠಾಣ, ಹಸಿರು ತೋರಣ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಎನ್.ಎಸ್. ಹಿರೇಮಠ, ಬಸವರಾಜ ನಾಲತವಾಡ, ಬಸವರಾಜ ಕೋರಿ, ಎಸ್.ಎಚ್. ಪಾಟೀಲ, ಎಚ್.ಬಿ. ದಳವಾಯಿ, ಸಂಗಣ್ಣ ಕಂಚ್ಯಾಣಿ, ಎಸ್.ಆರ್. ಗೌಡರ, ಎಂ.ಎಸ್. ಬಿರಾದಾರ, ಚಂದ್ರಶೇಖರ ಪ್ಯಾಟಿಗೌಡರ, ಶ್ರೀಶೈಲ ಕತ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-26-677158519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.