ಮೂಡಿಗೆರೆ: ‘ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವುದು ಸಮಾಜದ ಕರ್ತವ್ಯ’ ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಕೆ. ಇಬ್ರಾಹಿಂ ಹಾಜಿ ನುಡಿದರು.

ಕೊಟ್ಟಿಗೆಹಾರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಣವೇ ಸಮಾಜ ಪರಿವರ್ತನೆಯ ಬುನಾದಿ. ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಶಿಕ್ಷಣದ ಬೆಳಕು ಎಲ್ಲೆಡೆ ಹರಡಲು ಸಾಧ್ಯ’ ಎಂದರು.

1954ರಲ್ಲಿ ಕೇರಳದಲ್ಲಿ ಆರಂಭವಾದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್, ಇಂದು ದೇಶದಾದ್ಯಂತ 11 ಸಾವಿರಕ್ಕೂ ಹೆಚ್ಚು ಮದರಸಗಳು ಹಾಗೂ ಅರಬಿ ಕಾಲೇಜುಗಳನ್ನು ಹೊಂದಿದ್ದು, ಬಡ ಕುಟುಂಬಗಳ ಮಕ್ಕಳಿಗೆ ವಸತಿ ಸೌಲಭ್ಯ ಸಮೇತ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೊಟ್ಟಿಗೆಹಾರ ಬದ್ರಿಯಾ ಮಸೀದಿಯ ಅಧ್ಯಕ್ಷ ಮುನೀರ್ ಮಾತನಾಡಿ, ‘ಸಂಘ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸಾಧ್ಯ. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮತೋಲನವೇ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿಯಾಗಿದೆ’ ಎಂದರು.

ಇಮ್ದಾನಿ ಉಸ್ತಾದ್, ಮೂಡಿಗೆರೆ ಧರ್ಮಗುರು ಯಮನಿ ಉಸ್ತಾದ್ ಹಾಗೂ ಸುಲೈಮಾನ್ ಉಸ್ತಾದ್ ಮಾತನಾಡಿದರು. ಹಸೇನ, ವ್ಯಾಪಾರಿ ಹಮ್ಜಾ, ಮೂಡಿಗೆರೆ ಬದ್ರಿಯಾ ಮಸ್ಜಿದ್ ಅಧ್ಯಕ್ಷ ಶರೀಫ್, ಹಮೀದ್, ಆಸೀಫ್, ಇಬ್ರಾಹಿಂ ಹಾಜಿ, ಚಕಮಕ್ಕಿ ಅಯ್ಯುಬ್ ಹಾಜಿ, ಮಾಗುಂಡಿ ಅಯ್ಯುಬ್ ಹಾಜಿ, ಉಮ್ಮರ್ ಬಣಕಲ್, ಟಿ.ಎ. ಖಾದರ್, ಬಾವಕ್ಕ, ಸಿದ್ದಿಕ್, ಅಜೀದ್, ಫಾರೂಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-126-1126339706

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.