ಮೂಲ್ಕಿ: ಕಲೆಯ ಆಸಕ್ತಿ ಇರುವ ಮನುಷ್ಯ ನೆಮ್ಮದಿ, ಆತ್ಮಸಂತೋಷವನ್ನು ಅನುಭವಿಸಬಲ್ಲ. ಉತ್ತಮ ಕಲಾವಿದರ ನಾಟ್ಯ, ಸಂಗೀತ ಪ್ರದರ್ಶನಗಳನ್ನು ನೋಡುವ ಒಳ್ಳೆಯ ಪ್ರೇಕ್ಷಕರು ಹೆಚ್ಚಾಗಬೇಕು ಎಂದು ಕಾಣಿಯೂರು ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹೇಳಿದರು.

ಕಟೀಲು ಪ್ರತಿಷ್ಠಾನದ ಕಟೀಲು ಕಲಾ ಉತ್ಸವದಲ್ಲಿ ನಡೆದ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇದವ್ಯಾಸ ತಂತ್ರಿ ಶಿಬರೂರು, ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕಮಲಾದೇವಿಪ್ರಸಾದ ಅಸ್ರಣ್ಣ, ಶ್ರೀಹರಿನಾರಾಯಣದಾಸ ಅಸ್ರಣ್ಣ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಮಿಜಾರು ರಾಜೇಶ್ ಶೆಟ್ಟಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪುಣೆ ಬಂಟರ ಸಂಘದ ರೋಹಿತ್ ಶೆಟ್ಟಿ, ಐಕಳ ಆನಂದ ಶೆಟ್ಟಿ, ಉದಯಕುಮಾರ ಮಡಂತ್ಯಾರು, ಹರೀಶ್ ಶೆಟ್ಟಿ, ನಿಶಾನ್ ಉಳ್ಳಾಲ್, ಗಿರೀಶ್ ಶೆಟ್ಟಿ ತೆಳ್ಳಾರು, ಡಾ.ವೆಂಕಟ್ರಮಣ, ಟ್ರಸ್ಟಿಗಳಾದ ಸುದೇಶ್ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೋರಿಯಾರ್, ರತ್ನಾಕರ ಶೆಟ್ಟಿ ಎಕ್ಕಾರು, ಗಿರೀಶ್ ಶೆಟ್ಟಿ ಕಟೀಲು, ಶಿಬರೂರು ಮಧುಕರ ಅಮೀನ್, ದೊಡ್ಡಯ್ಯ ಮೂಲ್ಯ, ಲೋಕಯ್ಯ ಸಾಲ್ಯಾನ್ ಭಾಗವಹಿಸಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಅನಂತಪದ್ಮನಾಭ ಅಸ್ರಣ್ಣ ಕಲಾ ಉತ್ಸವದ ಕುರಿತು ಮಾತನಾಡಿದರು.

ಸಂಗೀತ, ನೃತ್ಯ, ಹಾರ್ಮೋನಿಯಂ ಶಿಕ್ಷಕರಾದ ಅರುಣಾ ರಾವ್, ವಾಸು ಮಾಸ್ಟರ್, ಶ್ರಾವ್ಯ ಅವರನ್ನು ಗೌರವಿಸಲಾಯಿತು. ಕಲಿಕೆಯಲ್ಲಿ ಸಾಧನೆ ಮಾಡಿದ ಪ್ರತಿಷ್ಠಾನದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಭಜನಾ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಫಲಕ, ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತ ಪರೀಕ್ಷೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಭಜನಾ ಸ್ಪರ್ಧೆ ವಿಜೇತರು: ಕುಟುಂಬ ಭಜನೆ ಸ್ಪರ್ಧೆ ವಿಭಾಗ– ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾರ್ಕಳ (ಪ್ರ), ಕಟೀಲು ಸಹೋದರಿಯರು (ದ್ವಿ), ಸಾಕ್ಷಾತ್ ಶಿವ ಭಜನಾ ಮಂಡಳಿ, ಚಾರ್ವಾಕ (ತೃ). 16 ವರ್ಷ ವಯಸ್ಸಿಗಿಂತ ಕೆಳಗಿನವರ ವಿಭಾಗ: ಶ್ರೀ ರಾಮ ಭಜನಾ ಮಂಡಳಿ ಮಲ್ಪೆ (ಪ್ರ), ಸ್ವರಾಂಜಲಿ ಸುರತ್ಕಲ್ (ದ್ವಿ), ವೀರಾಂಜನೇಯ ಭಜನಾ ಮಂಡಳಿ ಸುಳ್ಯ (ತೃ). 16 ವರ್ಷಕ್ಕಿಂತ ಮೇಲಿನವರ ವಿಭಾಗ: ಸ್ವರ ಸಾಗರ ಕೃಷ್ಣಾಪುರ ಸುರತ್ಕಲ್ (ಪ್ರ), ಸ್ವರಾಂಜಲಿ ಸುರತ್ಕಲ್ (ದ್ವಿ), ಲಕ್ಷ್ಮೀನಾರಾಯಣ ಭಜನಾ ಮಂಡಳಿ ಸಸಿಹಿತ್ಲು (ತೃ).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-29-215412948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.