ಮೂಲ್ಕಿ: ಸಮಾಜದ ಸಂಘಟನೆಯಿಂದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯ. ಸಂಘಟನೆಯನ್ನು ಗಟ್ಟಿಗೊಳಿಸಬೇಕಾದರೆ ದಾನಿಗಳ ಮೂಲಕ ಸೇವಾ ಕೈಂಕರ್ಯವನ್ನು ವಿಸ್ತರಿಸಿಕೊಳ್ಳಬೇಕು ಎಂದು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ರಾಮದಾಸ್ ಆಚಾರ್ಯ ಹೇಳಿದರು.

ಕಿನ್ನಿಗೋಳಿ ಬಳಿಯ ನಾನಿಲ್ತಾರ್ ಕುಲಾಲ ಸಂಘದಲ್ಲಿ ಮುಂಡ್ಕೂರು-ಮುಂಬೈ ನಾನಿಲ್ತಾರ್ ಅಭಿಮಾನಿ ಬಳಗದ ಸಂಯೋಜನೆಯಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕುಲಾಲ ಸಂಘಕ್ಕೆ ನೀಡಿದ ಜನರೇಟರ್ ಹಸ್ತಾಂತರಿಸಿ ಅವರು ಮಾತನಾಡಿದರು.

ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಬೋಳ ಡಾನ್ ಬಾಸ್ಕೊ ಚರ್ಚ್ನ ಧರ್ಮಗುರು ಮಿಲ್ಟನ್ ಫರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಕುಲಾಲ ಸಮಾಜದ ಹಿರಿಯರಾದ ಮೀನಾ ಮೂಲ್ಯ ಮಡಿಕೆ ಮನೆ, ವಾರಿಜ ಮೂಲ್ಯ ಹೊಸಹಿತ್ಲು, ಶ್ರೀನಾಥ್ ಸಾಲ್ಯಾನ್, ಹರೀಶ್ ಮೂಲ್ಯ, ಸರೋಜಾ ಮೂಲ್ಯ ಮುಂಬೈ, ಮಂಜಪ್ಪ ಮೂಲ್ಯ ಏಳಿಂಜೆ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಉದ್ಯಮಿ ಪದ್ಮನಾಭ ಬಂಗೇರ, ಪ್ರೇಮಾನಂದ ಕುಲಾಲ್ ಕೋಡಿಕಲ್, ಸತೀಶ್ ಪೂಜಾರಿ, ಕುಶ ಮೂಲ್ಯ, ದಿವ್ಯರಾಜ್ ಕುಲಾಲ್, ಜಗದೀಶ್ ಕುಲಾಲ್, ಬಿ.ದಿನೇಶ್ ಕುಲಾಲ್, ರುಕ್ಮಿಣಿ ಯಶೋಧರ ಸಾಲ್ಯಾನ್, ಸುಕುಮಾರ ಸಾಲ್ಯಾನ್, ಬಳಗದ ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪರ್, ಅರುಣಾ ಕುಲಾಲ್ ಉಳೆಪಾಡಿ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರ್ಷಿತಾ ಕುಲಾಲ್, ಸುಧಾಕರ್ ವೈ. ಮೂಲ್ಯ ನಡೆಸಿಕೊಟ್ಟರು.

ಬೆಳಿಗ್ಗೆ ದುರ್ಗಾ ಭಜನಾ ಮಂಡಳಿ, ನಾನಿಲ್ತಾರ್, ವಿಠೋಬಾ ಭಜನಾ ಮಂಡಳಿ, ಶಂಕರಪುರ ಅವರಿಂದ ಭಜನಾ ಸಂಕೀರ್ತನೆ, ಕುಲಾಲ ಸಂಘ ನಾನಿಲ್ತಾರ್ ಮಹಿಳಾ ಸದಸ್ಯರಿಂದ ಹಾಗೂ ಯುವ ವೇದಿಕೆಯ ಸದಸ್ಯರಿಂದ ನೃತ್ಯ ವೈಭವ, ವಿಜಯ ಕಲಾವಿದರು ಕಿನ್ನಿಗೋಳಿ ಅವರಿಂದ ಬೈರಾಸ್ ಭಾಸ್ಕರೆ ತುಳುನಾಟಕ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-29-1985243453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.