ಮುಂಡರಗಿ: ‘ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇವಾಂಗ ಜ್ಯೋತಿಯು ನಾಡಿನಾದ್ಯಂತ ಸಂಚರಿಸುತ್ತಿದ್ದು, ಅದರ ಉದ್ದೇಶವನ್ನು ಸಮಾಜದವರು ಈಡೇರಿಸಬೇಕು. ಆ ಮೂಲಕ ದೇವಾಂಗ ಜ್ಯೋತಿಗೆ ಗೌರವ ಸಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಅವಿನಾಶ ಗೋಡಕಿಂಡಿ ತಿಳಿಸಿದರು.

ಪಟ್ಟಣದ ಬನಂಕರಿ ದೇವಸ್ಥಾನದಲ್ಲಿ ಗುರುವಾರ ನಡೆದ ದೇವಾಂಗ ಜ್ಯೋತಿ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ದಯಾನಂದ ಪುರಿ ಮಹಾಸ್ವಾಮಿ ಅವರ 36ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ದೇವಾಂಗ ಜಾಗೃತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬದಾಮಿಯ ಬನಶಂಕರಿಯಲ್ಲಿ ಮೇ 9 ಹಾಗೂ 10ರಂದು ಸಮಾರಂಭ ಜರುಗಲಿದ್ದು, ಸಮಾಜದ ಎಲ್ಲ ಬಾಂಧವರು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕೃಷ್ಣಮೂರ್ತಿ ಗುಬ್ಬಿ, ನಾಗರಾಜ ಭೂತನವರ, ಕೃಷ್ಣಮೂರ್ತಿ ದೊತ್ರಗಾವಿ, ಮಲ್ಲಪ್ಪ ದೊತ್ರಗಾವಿ, ಶಂಕ್ರಪ್ಪ ಹುಳ್ಳಿ, ಸಂಗಮೇಶ ನಿಡಗುಂದಿ, ಕೃಷ್ಣಪ್ಪ ಗಡ್ಡಿ, ಬಸನಗೌಡ ಪಾಟೀಲ, ಪಕೀರಪ್ಪ ಪಂಜಿ, ಲೋಕಪ್ಪ ಧೋತ್ರಗಾವಿ, ಬಸವರಾಜ ಗೋದಿ, ಲಕ್ಷ್ಮೀ ಪಾಟೀಲ, ಲಕ್ಷ್ಮೀ ದೊತ್ರಗಾವಿ, ಪಾರ್ವತಿ ಪಂಜೀ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-23-3988478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.