ಮುಂಡರಗಿ: ‘ಸಮಸಮಾಜ ನಿರ್ಮಾಣವು ಬಸವಾದಿ ಶರಣರ ಮುಖ್ಯ ಉದ್ದೇಶವಾಗಿತ್ತು. ಈ ಕಾರಣದಿಂದ ಶರಣರು ಮಹಾಮನೆ ಹಾಗೂ ಅನುಭವ ಮಂಟಪಗಳಲ್ಲಿ ಸರ್ವರಿಗೂ ಸಮಾನ ಅವಕಾಶ ನೀಡಿದರು. ಆ ಮೂಲಕ ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು’ ಎಂದು ತಾಲ್ಲೂಕು ಕಸಾಪ ಘಟಕದ ಅದ್ಯಕ್ಷ ಎಂ.ಜಿ.ಗಚ್ಚಣ್ಣವರ ತಿಳಿಸಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ತಾಲ್ಲೂಕು ಕದಳಿ ಮಹಿಳಾ ವೇದಿಕೆ, ಜಾಗತಿಕ ಲಿಂಗಾಯತ ಮಹಿಳಾ ವೇದಿಕೆ ಹಾಗೂ ಮುಕ್ತಾಯಕ್ಕ ಬಳಗಗಳು ಗುರುವಾರ ಇಲ್ಲಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ, ಬಸವೇಶ್ವರ ಜಯಂತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಉಪನ್ಯಾಸಕಿ ಅರುಣಾ ಗುಜ್ಜರಿ ಮಾತನಾಡಿ, ‘ಅಕ್ಕಮಹಾದೇವಿಯು, ಮಹಿಳೆ ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾಳೆ. ಸರ್ವಸಂಗ ಪರಿತ್ಯಾಗಿಯಾಗಿದ್ದ ಅಕ್ಕಮಹಾದೇವಿಯ ವಚನಗಳು ಸರ್ವಕಾಲಕ್ಕೂ ಸಲ್ಲುತ್ತವೆ’ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಹನುಮರಡ್ಡಿ ಇಟಗಿ ಮಾತನಾಡಿ, ‘ಕಾಯಕ ಹಾಗೂ ದಾಸೋಹಗಳು ಶರಣರು ನೀಡಿರುವ ಎರಡು ಬಹುದೊಡ್ಡ ಕೊಡುಗೆಗಳಾಗಿದ್ದು, ಅವು ನಮ್ಮ ಸಮಾಜದ ಆರ್ಥಿಕ ಸ್ಥಿತಿ ಸುಧಾರಿಸುತ್ತವೆ. ದುಡಿಯದ ಕೈಗಳಿಗೆ ಉಣ್ಣುವ ಹಕ್ಕಿಲ್ಲ ಎಂಬುದನ್ನು ಪ್ರತಿಪಾದಿಸಿದ ಶರಣರ ಕಾಯಕದ ಮಹತ್ವವನ್ನು ಸಮಾಜಕ್ಕೆ ತಿಳಿಸಿದರು’ ಎಂದು ಹೇಳಿದರು.

ತಾಲ್ಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸೀತಾ ಬಸಾಪುರ ಅದ್ಯಕ್ಷತೆ ವಹಿಸಿದ್ದರು. ವೀಣಾ ಪಾಟೀಲ ಮಾತನಾಡಿದರು.

ಜಯಶ್ರೀ ಅಳವುಂಡಿ ಸರ್ವರನ್ನು ಸ್ವಾಗತಿಸಿದರು. ಪ್ರತಿಭಾ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಕುಕುನೂರ ವಂದಿಸಿದರು.

ಮುಕ್ತಾಯಕ್ಕ ಬಳಗದ ಅಧ್ಯಕ್ಷೆ ಸುಕನ್ಯಾ ಕಬ್ಬೂರಮಠ, ಉಮಾ ದೊಡ್ಡಮನಿ, ಪಾರ್ವತಿ ಕುಬಸದ, ಜ್ಯೋತಿ ಕುರಿಯರ, ಲೀಲಕ್ಕ ಅಕ್ಕೂರ, ಸಾವಿತ್ರಮ್ಮ ಮಡಿವಾಳರ ಈರಮ್ಮ ಕುಂದಗೋಳ, ಶಂಕರ ಕುಕನೂರ, ಪಾಲಾಕ್ಷಿ ಗಣದಿನ್ನಿ, ಅಶೋಕ ಅಣ್ಣಿಗೇರಿ, ಎಸ್.ಆರ್.ಬಸಾಪುರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-23-81934392

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.