ಮುಂಡರಗಿ: 'ಅಲ್ಲಮಪ್ರಭು ಹಾಗೂ ಬಸವಾದಿ ಶರಣರಿಂದ ನಿರ್ಮಾಣಗೊಂಡಿದ್ದ ಮಹಾಮನೆಯು ಶರಣರ ಶಕ್ತಿ ಕೇಂದ್ರವಾಗಿತ್ತು. ಅಂದು ಶರಣರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿರುವುದು ಅವುಗಳ ಮಹತ್ವವನ್ನು ಸಾರುತ್ತದೆ' ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಲ್ಲಮ ಪ್ರಭು, ಅಕ್ಕ ಮಹಾದೇವಿ ಹಾಗೂ ಶ್ರೀಮಠದ 9ನೇ ಪೀಠಾಧಿಪತಿಗಳ 59ನೇ ಪುಣ್ಯಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕುಕನೂರಿನ ಮಹಾದೇವ ಸ್ವಾಮೀಜಿ ಮಾತನಾಡಿ, ಮುಂಡರಗಿಯ ಅನ್ನದಾನೀಶ್ವರ ಮಹಾಸ್ವಾಮಿಜಿ ಅವರು ಮಹಾಮನೆಯ ಶರಣರಂತೆ ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರು ನಾಡಿನ ಯುವ ಮಠಾಧೀಶರಿಗೆ ಮಾದರಿಯಾಗಿದ್ದಾರೆ. ನೂರಾರು ಗ್ರಂಥಗಳನ್ನು ರಚಿಸುವ ಮೂಲಕ ಅವರು ಕನ್ನಡಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಾಚಾರ್ಯ ಸಂತೋಷ ಹಿರೇಮಠ ಮಾತನಾಡಿ, ಪವಾಡ ಪುರುಷರಾಗಿದ್ದ ಶ್ರೀಮಠದ ನವಮ ಪೀಠಾಧಿಪತಿಗಳಾದ ವೆಂಕಟಾಪುರದ ಅಜ್ಜನವರು ಭಕ್ತರ ಅಂತರಂಗವನ್ನು ಬಲ್ಲವರಾಗಿದ್ದರು. ಅವರ ಅವಧಿಯಲ್ಲಿ ಶ್ರೀಮಠದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದವು ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಫಕ್ಕೀರಪ್ಪ ವಜ್ರಬಂಡಿ ಮಾತನಾಡಿದರು. ಉಪನ್ಯಾಸಕಿ ಸುನೀತಾ ಅಂಗಡಿ ಅವರು ಅಕ್ಕ ಮಹಾದೇವಿ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದ ಭಕ್ತಿಸೇವೆ ವಹಿಸಿಕೊಂಡಿದ್ದ ಆರ್.ಬಿ.ಡಂಬಳಮಠ ಕುಟುಂಬದವರನ್ನು ಸನ್ಮಾನಿಸಲಾಯಿತು. ಸಾಯಿ ನಾಕೊಡ್ ಅವರು ಸಂಗೀತ ಸೇವೆ ಸಲ್ಲಿಸಿದರು. ದಿವ್ಯಶ್ರೀ ಮತ್ತು ಮೇಘನಾ ಭರತನಾಟ್ಯ ಪ್ರದರ್ಶಿಸಿದರು. ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದವರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಶಕುಂತಲಾ ಹಂಪಿಮಠ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಾಲೇಶ್ವರ ಸ್ವಾಮೀಜಿ, ಕೆ.ವಿ.ಹಂಚಿನಾಳ, ಬಿ.ಜಿ.ಜವಳಿ, ಎಂ.ಜಿ.ಗಚ್ಚಣ್ಣವರ, ವೀರನಗೌಡ ಗುಡದಪ್ಪನವರ, ಡಿ.ಸಿ.ಮಠದ, ಎಂ.ಎಸ್.ಶಿವಶಟ್ಟರ, ಎಂ.ವಿ.ಕುಲಕರ್ಣಿ, ಗುಡದಪ್ಪ ಲಿಂಬಿಕಾಯಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-23-947947651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.