ಮುಂಡಗೋಡ: ‘ದೈವಬಲ ಇದ್ದರೇ, ಹಣಬಲ ಹಾಗೂ ಜನಬಲವನ್ನು ಗಳಿಸುವುದು ಸುಲಭ. ಆದರೆ, ಬಹುತೇಕರ ಮನಸ್ಸಿನಲ್ಲಿ, ಹಣಬಲ ಇದ್ದರೇ ಮಾತ್ರ, ಇನ್ನುಳಿದವುಗಳನ್ನು ಗಳಿಸಬಹುದು ಎಂದು ತಿಳಿದುಕೊಂಡಿದ್ದಾರೆ. ಹಣದ ಹಿಂದೆ ಬೆನ್ನತ್ತಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ವೇದಮೂರ್ತಿ ಲಕ್ಷ್ಮಿನಾರಾಯಣ ಭಟ್ಟ ಹೇಳಿದರು.

ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಆವಣದಲ್ಲಿ ಭಾನುವಾರ ನಡೆದ ‘ಅನ್ನ ಛತ್ರ’ದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.

‘ಗಳಿಸಿರುವುದರಲ್ಲಿ ಒಂದಿಷ್ಟು ಭಾಗವನ್ನು ದಾನ ಮಾಡಬೇಕು. ಮಾಡಿರುವ ದಾನ, ತನಗೆ ಮತ್ತು ದೇವರಿಗೆ ಮಾತ್ರ ತಿಳಿದಿರಬೇಕು. ಸಾವಿರ ಮಂದಿಗೆ ಗೊತ್ತಾಗಲಿ ಎಂದು ಮಾಡುವ ದಾನ ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ. ಮಾಡಿರುವ ದಾನ ಸತ್ಕಾರ್ಯಕ್ಕೆ ಬಳಕೆಯಾಗಿ, ಜನರು ಅದರ ಬಗ್ಗೆ ಮಾತನಾಡುವಂತಿರಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಉಸಿರು ಹೋದ ನಂತರವೂ ಹೆಸರು ಉಳಿಯುವಂತೆ ಕೆಲಸ ಮಾಡಿದಾಗ, ಜೀವನ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ರುದ್ರಮುನಿ ಸ್ವಾಮೀಜಿ ಮಾತನಾಡಿ, ‘ಪಟ್ಟಣದ ಮಾರಿಕಾಂಬಾ ದೇವಸ್ಥಾನವನ್ನು ಟ್ರಸ್ಟ್ ಕಮಿಟಿಯವರು ಪ್ರಾಮಾಣಿಕತೆಯಿಂದ ಅಭಿವೃದ್ಧಿ ಪಡಿಸಿದ್ದಾರೆ. ಧರ್ಮದ ಕಾರ್ಯಗಳು ನಿರಂತರವಾಗಿ ನಡೆಯಲು, ಎಲ್ಲರೂ ಕೈಜೋಡಿಸಬೇಕು. ಧರ್ಮ ಉಳಿದರೆ, ನಾವು ಉಳಿಯುತ್ತೇವೆ. ಸಂಸ್ಕಾರಯುತ ಜೀವನಕ್ಕೆ ಒತ್ತು ನೀಡಬೇಕು. ದೇವಸ್ಥಾನದ ಅಭಿವೃದ್ಧಿಗೆ ದಾನ ಮಾಡುವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ’ ಎಂದರು.

ಉದ್ಯಮಿ ಬಾಲು ನಾಯಕ ಮಾತನಾಡಿ, ‘ಪ್ರಾಮಾಣಿಕತೆ, ಶ್ರದ್ಧೆ ಇದ್ದಲ್ಲಿ ಧಾರ್ಮಿಕ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಜೀವನದಲ್ಲಿ ಗುರಿ ಹಾಗೂ ಗುರು ಇದ್ದಾಗ, ಅಂದುಕೊಂಡಿರುವ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಅನ್ನಛತ್ರ ನಿರ್ಮಾಣವು ಪುಣ್ಯದ ಕೆಲಸವಾಗಿದೆ’ ಎಂದರು.

ಮಾರಿಕಾಂಬಾ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರಮೇಶ ಕಾಮತ, ಗುತ್ತಿಗೆದಾರ ಸಿದ್ದಣ್ಣ ಕಮಡೊಳ್ಳಿ, ಡಾ.ಪಿ.ಪಿ.ಛಬ್ಬಿ, ಎಸ್.ಎಸ್.ಪಾಟೀಲ, ಮಾರುತಿ ಓಂಕಾರ, ಸುಜೀತ ಸದಾನಂದ, ನಾರಾಯಣ ಉಪ್ಪುಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-341141807

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.