ತಿ.ನರಸೀಪುರ: ‘ಕ್ರಾಂತಿಕಾರಿ ಬಸವಣ್ಣ ಅವರು ಮಾತಿನ ವಸ್ತುವಾಗದೇ ನಮ್ಮ ಆತ್ಮದ, ಬದುಕಿನ ವಸ್ತುವಾಗಬೇಕು. ಆಗ ಮಾತ್ರ ಬಸವಣ್ಣನವರ ಚಿಂತನೆಗಳನ್ನು ಅರಿಯಲು ಸಾಧ್ಯ’ ಎಂದು ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿವಕುಮಾರ ಸ್ವಾಮಿಗಳ ಸೇವಾ ಟ್ರಸ್ಟ್ ಸೋಮವಾರ ಪಟ್ಟಣದ ವಿದ್ಯೋದಯ ಬಾಲಕಿಯರ ಕಾಲೇಜಿನ ಪಕ್ಕದ ಸಭಾಂಗಣದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಹಾಗೂ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

‘ಬಸವಣ್ಣನವರ ಹೆಸರು ಹೇಳುವ ನಾವು ಅವರ ಚಿಂತನೆಗಳನ್ನು ಅರ್ಥೈಸಿಕೊಳ್ಳಲು ವಿಫಲರಾಗಿದ್ದೇವೆ. ಅವರನ್ನು ‘ನನ್ನ ಬಸವಣ್ಣ’ ಎನ್ನದೇ ‘ನಮ್ಮ ಬಸವಣ್ಣ’ ಎಂದು ಹೇಳಬೇಕು. ಇಷ್ಟಲಿಂಗ ಪೂಜೆ ಮಾಡಿದರೆ ಸಾಲದು, ಇದರ ಜೊತೆಗೆ ಸಮಾಜಕ್ಕೆ ಕೈಲಾದ ಸೇವೆಯನ್ನೂ ಮಾಡಬೇಕು ಎಂಬ ಅವರ ಮಾತನ್ನು ಪಾಲಿಸಬೇಕಿದೆ’ ಎಂದು ಸಲಹೆ ಮಾಡಿದರು.

‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಶಿವಯೋಗಿಗಳಾಗಿದ್ದರು. ಅವರು ತಮ್ಮ ಬದುಕಿನುದ್ದಕ್ಕೂ ಶಿವ ಪೂಜೆ, ಜಪ, ಧ್ಯಾನ ಮಾಡಿಕೊಂಡೇ ಬದುಕಿದರು. ಅವರದು ತ್ರಿವಿಧ ದಾಸೋಹ ಸೇವೆಯಾಗಿತ್ತು’ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ‘ತ್ರಿವಿಧ ದಾಸೋಹ ಸೇವೆಯಿಂದ ಶಿವಕುಮಾರ ಸ್ವಾಮೀಜಿ ಅವರು ಭಾರತ ರತ್ನ ಪ್ರಶಸ್ತಿಗಿಂತಲೂ ಎತ್ತರದಲ್ಲಿದ್ದಾರೆ. ಅವರ ಸೇವೆ, ನಡೆ –ನುಡಿ, ಆಚರಣೆಗಳು ಅವಿಸ್ಮರಣೀಯ, ಅವರು ರಾಜ್ಯದ ಜನರಿಗೆ ನಡೆದಾಡುವ ದೇವರು’ ಎಂದು ಹೇಳಿದರು.

ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮೈಸೂರಿನಲ್ಲಿ ನಡೆದ ವಚನ ಚಿಂತನಾ ಲಹರಿ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳನ್ನು ಚಿತ್ರ ಲಹರಿಯ ಮೂಲಕ ಪ್ರದರ್ಶಿಸಲಾಗಿತ್ತು. ಅದೇ ರೀತಿಯಲ್ಲಿ ಗ್ರಾಮೀಣ ಭಾಗದಲ್ಲೂ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಶಿವಾನಂದ ಶರ್ಮರು ಶಿವಕುಮಾರ ಸ್ವಾಮೀಜಿಗಳ ಒಡನಾಡಿಗಳಾಗಿದ್ದರು’ ಎಂದು ಶ್ರೀಗಳು ಸ್ಮರಿಸಿದರು

ಹಲವಾರ ಮುಡುಕನ ಪುರದ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಮಾಡ್ರಳ್ಳಿ ಪಟ್ಟದ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸರಗೂರು ಹೊಸಮಠದ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಮುಡುಕುತೊರೆ ವಿರಕ್ತಮಠದ ನಂದಿಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಳ್ಳಿಪುರ ಪಟ್ಟದ ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಹೆಳವರಹುಂಡಿಯ ದಾಸೋಹ ಮಠದ ಶ್ರೀಗಳು, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ಶಿವ ಮಲ್ಲಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಆರ್ ಪ್ರಕಾಶ್, ಯುವ ಘಟಕದ ತಾಲೂಕು ಅಧ್ಯಕ್ಷ ಕೈಯಂಬಳ್ಳಿ ಅಶೋಕ್, ವಕೀಲರಾದ ಪರಮೇಶ್, ಜ್ಞಾನೇಂದ್ರ ಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ಎಂ.ಮಹೇಶ್, ಮಾದಪ್ಪ, ಬಸಪ್ಪ, ಹಲವಾರ ಪರಮೇಶ್ ಪಟೇಲ್, ಕಾರ್ ಮಲ್ಲಪ್ಪ, ಕೆ.ಮಲ್ಲು, ಜ್ಯೋತಿ ಪರಮೇಶ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆಬ್ಬೆಹುಂಡಿ ಸೋಮಶೇಖರ್, ತೊಟ್ಟವಾಡಿ ರವಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-38-1374966958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.