ಮೈಸೂರು: ‘ಬಸವಣ್ಣ ಅಂಚೆ ಚೀಟಿ, ನಾಣ್ಯ, ಮೂರ್ತಿ, ಭಾವಚಿತ್ರಗಳಲ್ಲಿಕಾಣುವುದಕ್ಕಿಂತಲೂ ಅವರನ್ನು ನಮ್ಮ ಸಾಕ್ಷಿಪ್ರಜ್ಞೆ ಆಗಿಸಬೇಕು. ತಪ್ಪು ಮಾಡುವಾಗ ಬಸವ ಪ್ರಜ್ಞೆ ಎಚ್ಚರಿಸಬೇಕು’ ಎಂದು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್. ತ್ರಿಪುರಾಂತಕ ಹೇಳಿದರು.

ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, ‘ಬಸವಾದಿ ಶರಣರ ಮೌಲ್ಯಗಳು ಆಚರಣೆಗೆ ಸೀಮಿತವಾಗಿದೆ. ಅನುಸರಣೆಯಲ್ಲಿ ಸೋತಿದ್ದೇವೆ’ ಎಂದರು.

‘ಮೂರ್ತಿ ಪೂಜೆ, ಅಸಮಾನತೆ, ಮೂಢನಂಬಿಕೆಯನ್ನು 12ನೇ ಶತಮಾನದಲ್ಲಿಯೇ ಬಸವಣ್ಣ ವಿರೋಧಿಸಿದ್ದರು. ಸ್ತ್ರೀ ಸಮಾನತೆ ನೀಡಿದ್ದರು. ಆದರೆ, ಇಂದಿಗೂ ಜಾತಿ- ಧರ್ಮ, ಮತಭೇದದ ಕೂಪದಲ್ಲಿ ಬಿದ್ದಿದ್ದೇವೆ. ಇಂದು ರಕ್ಷಕರೇ ಸ್ತ್ರೀ ಭಕ್ಷಕರಾಗಿದ್ದಾರೆ. ಮನೆಗಳಲ್ಲಿ, ಸಮಾಜದಲ್ಲಿ ಶೋಷಣೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಿತ್ಯ 230ಕ್ಕೂ ಹೆಚ್ಚು ವಿಚ್ಚೇದನ ಪ್ರಕರಣಗಳು ದಾಖಲಾಗುತ್ತಿವೆ. ಆದರ್ಶ ಪುರುಷರು ಹುಟ್ಟಿದ ನೆಲದಲ್ಲಿ ಸಾಮಾಜಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘21ನೇ ಶತಮಾನದಲ್ಲಿಯೂ ಬಸವಣ್ಣ ಪ್ರಸ್ತುತ. ಅವರು ನುಡಿದಂತೆ ನಡೆದರು. ಮೂಢನಂಬಿಕೆ ಕುರಿತು ಮಾತನಾಡುತ್ತಿದ್ದ ಕಾಲದಲ್ಲಿ ವೈಚಾರಿಕತೆ ಕುರಿತು ಜಾಗೃತಿ ಮೂಡಿಸಿದರು. ಜಾತಿ, ಧರ್ಮಗಳ ಬಗ್ಗೆ ಕಿತ್ತಾಡುತ್ತಿದ್ದ ಕಾಲದಲ್ಲಿ ಮಾನವ ಧರ್ಮದ ಬಗ್ಗೆ ತಿಳಿಸಿಕೊಟ್ಟರು. ಸಮಾಜದ ಕಟ್ಟಕಡೆಯ ವ್ಯಕ್ತಿಯಾದ ಸೂಳೆ ಸಂಕವ್ವೆಗೂ ಅನುಭವ ಮಂಟಪದಲ್ಲಿ ಸ್ಥಾನ ಕೊಟ್ಟಿದ್ದರು’ ಎಂದು ಸ್ಮರಿಸಿದರು.

‘ಎನಗಿಂತ ಕಿರಿಯಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣ ಹೇಳಿದ್ದರು. ಆದರೆ, ಇಂದಿನ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನಮಗೆ ಸ್ಥಾನಮಾನವನ್ನು ಬಿಂಬಿಸುವುದೇ ಗೀಳಾಗಿ ಬಿಟ್ಟಿದೆ’ ಎಂದು ಹೇಳಿದರು.

‘1,500 ವಚನಗಳನ್ನು ಬಸವಣ್ಣ ಬರೆದರು. ಕಳಬೇಡ ಕೊಲಬೇಡ, ಛಲಬೇಕು ಶರಣಂಗೆ– ಎಂಬೆರಡು ವಚನಗಳನ್ನು ಅನುಸರಿಸಿದರೆ ಸಾಕು ಸಮಾಜವು ಶುದ್ಧವಾಗುತ್ತದೆ. ಅಪರಾಧಗಳು ನಡೆಯುವುದಿಲ್ಲ. ಬಸವಾದಿ ಶರಣರ ವಚನಗಳನ್ನು ಅನುಸರಿಬೇಕು. ಅದರಿಂದ ಬದುಕು ಉಜ್ವಲವಾಗುತ್ತದೆ’ ಎಂದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವರಾದ ಪ್ರೊ.ಎಸ್.ಕೆ.ನವೀನ್ ಕುಮಾರ್, ಪ್ರೊ.ಸಿ.ಎಸ್.ಆನಂದಕುಮಾರ್, ಡೀನ್ಗಳಾದ ಪ್ರೊ.ಎಂ.ರಾಮನಾಥಂ ನಾಯ್ಡು, ಪ್ರೊ.ಎನ್.ಆರ್.ಚಂದ್ರೇಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-39-1646255710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.