ಮೈಸೂರು: ‘ಬೌದ್ಧ ಧರ್ಮವು ವೈದಿಕ ಧರ್ಮ ನಡೆಸಿದ ರಕ್ತಪಾತದಿಂದಲೇ ಭಾರತದಿಂದ ಪಲಾಯನಗೊಂಡಿತೇ ಹೊರತು ಬೇರಾವ ಕಾರಣದಿಂದಲೂ ಅಲ್ಲ’ ಎಂದು ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.

ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ‘ಲಡಾಯಿ ಪ್ರಕಾಶನ’ವು ದಸಂಸ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನ, ಮಾನಸಗಂಗೋತ್ರಿಯ ಸಂಶೋಧಕರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ ‘ಬುದ್ಧ ಧಮ್ಮ ಮತ್ತು ಸಮಾಕ ಸುಧಾರಕರು’ ಮತ್ತು ‘ಬುದ್ಧ, ಧಮ್ಮ ಮತ್ತು ಮಹಿಳೆ’ ಪುಸ್ತಕಗಳನ್ನು ಬಿಡುಗಡೆ ಮಾತನಾಡಿದರು.

‘ಭಾರತೀಯ ದರ್ಶನದಲ್ಲಿ ಶ್ರಮಣ ಮತ್ತು ವೈದಿಕ ವಿಚಾರಧಾರೆಗಳ ನಡುವಿನ ಸಂಘರ್ಷವನ್ನು ನೋಡುತ್ತೇವೆ. 62 ಶ್ರಮಣ ಧಾರೆಗಳಲ್ಲಿ ಬುದ್ಧ ಧರ್ಮವು ಕೂಡ ಒಂದು. ಅದು ಒಂದು ಸಾವಿರ ವರ್ಷ ದೇಶದ ಪ್ರಮುಖ ಧರ್ಮವಾಗಿತ್ತು. ಅಶೋಕನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಧರ್ಮವು ವೈದಿಕರು ನಡೆಸಿದ ಹಿಂಸಾಚಾರಗಳಿಂದ ಇಲ್ಲವಾಯಿತು’ ಎಂದರು.

‘ಮುಸಲ್ಮಾನರಿಂದ ಭಾರತದಿಂದ ಬೌದ್ಧ ಧರ್ಮವು ಪಲಾಯನ ಮಾಡಿತು ಎಂಬ ವಾದದಲ್ಲಿ ಹುರುಳಿಲ್ಲ. ಬ್ರಿಟಿಷ್ ಅಧಿಕಾರಿ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಅವರು ನಡೆಸಿದ ಅಶೋಕನ ಶಿಲಾ ಶಾಸನಗಳು, ಬೌದ್ಧ ಸ್ತೂಪಗಳ ಉತ್ಖನನ ಕಾರಣ ಈ ಶ್ರವಣ ಪರಂಪರೆ ಜಗತ್ತಿಗೆ ಸಿಕ್ಕಿತು’ ಎಂದು ಹೇಳಿದರು.

‘ಈಗಲೂ ದೇಶದಲ್ಲಿ ಎಲ್ಲಿಯೇ ಉತ್ಖನನ ಮಾಡಿದರೂ ಬೌದ್ಧ ಧರ್ಮದ ಪಳೆಯುಳಿಕೆಗಳು ಸಿಗುತ್ತವೆ. ಅಯೋಧ್ಯೆಯಲ್ಲಿಯೂ ಶ್ರೀರಾಮ ಮಂದಿರ ಕಟ್ಟಲು ಅಗೆದಾಗ ಬುದ್ಧನ ಮೂರ್ತಿಗಳು ಸಿಕ್ಕಿವೆ ಅದನ್ನೂ ಯಾರು ಪ್ರಚುರಪಡಿಸಲಿಲ್ಲ’ ಎಂದು ವಿವರಿಸಿದರು.

‘ದೇಶದ ಎಲ್ಲ ಸುಧಾರಕರನ್ನು ಬುದ್ಧ ಪ್ರಭಾವಿಸಿದ್ದಾನೆ. 12ನೇ ಶತಮಾನದ ಬಸವಣ್ಣ ಹುಟ್ಟು ಹಾಕಿದ್ದೂ ವೈದಿಕ ವಿರೋಧಿಯಾದ ಧರ್ಮವನ್ನೇ. ಜಗತ್ತಿನ ಎಲ್ಲ ಧರ್ಮಗಳಿಗೂ ಬೌದ್ಧ ತಾತ್ವಿಕತೆಯ ದ್ರವ್ಯ ಸಿಕ್ಕಿದೆ. ಯೇಸುಕ್ರಿಸ್ತ ಕಾಶ್ಮೀರದ ಬೌದ್ಧ ಕೇಂದ್ರದಲ್ಲಿದ್ದ ಎಂಬ ವಾದವೂ ಇದೆ. ಇಸ್ಲಾಂ ಕೂಡ ಕ್ರಿಸ್ತನ ತತ್ವಗಳಿಂದ ಪ್ರಭಾವಿತವಾಗಿವೆ’ ಎಂದರು.

ಆರ್.ಕುಮಾರ್, ಕೀರ್ತಿ ಎಸ್.ಬೈಂ ದೂರು, ದೀಪಾ ಬುದ್ಧೆ ಅವರು ಕೃತಿಗಳ ಓದಿನ ಅನುಭವ ಹಂಚಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-39-94713889

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.