ಮೈಸೂರು: ‘ಸನಾತನಿಗಳು ಕಾಲಕಾಲಕ್ಕೆ ಭಿನ್ನ ರೂಪದಲ್ಲಿ ಅವರ ಅನಾರೋಗ್ಯಕರ ಚಿಂತನೆಯನ್ನು ಸಮಾಜಕ್ಕೆ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ಅವನ್ನು ಪ್ರಶ್ನಿಸದೆ, ಒಪ್ಪಿಕೊಂಡರೆ ಮತ್ತೆ ಅಜ್ಞಾನ ವ್ಯಾಪಿಸುತ್ತದೆ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.

ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯು ‘ಬಹುತ್ವ ಭಾರತ ಮತ್ತು ಸಂವಿಧಾನವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳು’ ಎಂಬ ವಿಷಯದ ಕುರಿತು ಎಂಜಿನಿಯರ್ಗಳ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಗ್ರಂಥಾಲಯ, ಶಿಕ್ಷಣ ಕೇಂದ್ರಗಳು ಹೊಸ ಕಾಲದ ದೇವಾಲಯಗಳು. ಅವನ್ನು ಬೆಳೆಸುವ ಕೆಲಸವಾಗಬೇಕು. ಅಂಬೇಡ್ಕರ್ ಉತ್ತರಾಧಿಕಾರಿಯಾಗಿಕೆಲಸ ಮಾಡಿದ್ದ ಬಸವಲಿಂಗಪ್ಪ ಅವರ ಜನ್ಮಶತಾಬ್ದಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಶೋಷಿತರ ಪರವಾಗಿ ಕೆಲಸ ಮಾಡಿದ ಚೇತನಗಳನ್ನು ನೆನಪಿಸಿಕೊಳ್ಳುವುದುನಮ್ಮ ಕರ್ತವ್ಯ’ ಎಂದು ಹೇಳಿದರು.

‘ತಲೆ ಮೇಲೆ ಮಲ ಹೋರುವ ಪದ್ಧತಿ ಸತತ ಹೋರಾಟದಿಂದ ಕೊನೆಯಾಯಿತು. ಆದರೆ ತಲೆಯೊಳಗಿರುವ ಮಲ ಇರುವವರೆಗೆ ಅಸ್ಪೃಶ್ಯತೆ ಹೋಗಲು ಸಾಧ್ಯವಿಲ್ಲ. ಸಮಾನತೆ ಹಾಗೂ ಸಹೋದರತ್ವ ಎಲ್ಲರ ಅಂತಿಮ ಗುರಿಯಾಗಬೇಕು. ಈ ಭಾವನೆ ಜನಮಾನಸದಲ್ಲಿ ಮೂಡಲು ಶ್ರಮಿಸಬೇಕಿದೆ. ಪ್ರಸ್ತುತ ಇರುವ ಸಮಸ್ಯೆಗಳಿಗೆ ಹೊಸ ರೂಪದ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಅನ್ಯಾಯಗಳನ್ನು ಸಹಿಸದೆ, ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದರಿಂದ ಶೋಷಣೆ ಕಡಿಮೆಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ದಲಿತರಿಗೆ ಪ್ರತ್ಯೇಕ ಮತದಾನದ ಬಗ್ಗೆ ಅಂಬೇಡ್ಕರ್ ಪ್ರತಿಪಾದಿಸಿದಾಗ, ಗಾಂಧೀಜಿ ಆಮರಣಾಂತ ಉಪವಾಸ ಮಾಡಿದರು. ಯಾಕೆಂದರೆ ಅವರಿಗೆ ದಲಿತರ ನೋವು ಗೊತ್ತಿರಲಿಲ್ಲ. ಗಾಂಧೀಜಿ ತೀರಿಕೊಂಡರೆ ದಲಿತರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಸತ್ಯಾಗ್ರಹ ನಿಲ್ಲಿಸುವಂತೆ ಅಂಬೇಡ್ಕರ್ ಕೇಳಿಕೊಳ್ಳುತ್ತಾರೆ. ಅವರು ವೇದಿಕೆ ಏರುತ್ತಿದ್ದಂತೆ ಗಾಂಧಿಯು ನಾನು ದಲಿತರ ದತ್ತು ಮಗ ಅಲ್ಲವೇ ಎನ್ನುತ್ತಾರೆ, ಹೌದು ನೀವು ದತ್ತು ಮಗ, ನಾನು ಮನೆಮಗ ಹೀಗಾಗಿ ಅವರ ಕಷ್ಟಗಳು ನಿಮಗೆ ತಡವಾಗಿ ಅರ್ಥವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಹೀಗೆ ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವವರಾಗಬೇಕು’ ಎಂದು ಹೇಳಿದರು.

ಪ್ರಗತಿಪರ ಚಿಂತಕ ನಾ.ದಿವಾಕರ್, ಸಂಘಟನೆಯ ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜ, ಸಂಯೋಜಕಿ ಗಿರಿಜಾ, ಸಾಹಿತಿ ಕೆ.ಪಿ.ಮಹಾಲಿಂಗು ಕಲ್ಕುಂದ, ಎಚ್.ಎನ್.ಅಣ್ಣಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-38-4555984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.