ಮೈಸೂರು: ‘ಹೇಮರೆಡ್ಡಿ ಮಲ್ಲಮ್ಮ ಮೌಲ್ಯಗಳನ್ನೇ ಬದುಕಿದ ಶರಣೆ. ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿದರು. ಟೀಕೆಗಳಿಗೆ ತಕ್ಷಣ ಪ್ರತಿಕ್ರಿಯಿಸದೇ ಪ್ರಶಾಂತ ಮನಸ್ಸಿನಿಂದ ಸ್ವೀಕರಿಸಿ, ಸತ್ಕಾರ್ಯಗಳ ಮೂಲಕವೇ ಸಮಾಜಕ್ಕೆ ಮಾದರಿಯಾದರು’ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಜೆ.ಪುಷ್ಪಲತಾ ಹೇಳಿದರು.

ನಗರದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬುಧವಾರ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ದನ ಕಾಯುತ್ತಾ, ಕೊಟ್ಟಿಗೆಯಲ್ಲೇ ಜೀವನ ನಡೆಸುತ್ತಾ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಶ್ರೇಯೋಭಿವೃದ್ಧಿಗೆ ದುಡಿದರು’ ಎಂದರು.

‘ದ್ಯಾಂಪುರ ಚೆನ್ನಕವಿ ಬರೆದಿರುವ ಮಲ್ಲಮ್ಮನ ಚರಿತ್ರೆ ಅನ್ನು ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಹೊಸಗನ್ನಡ ಗದ್ಯಾನುವಾದ ಮಾಡಿದ್ದು, ಅದನ್ನು ಓದಿದರೆ ಸಾಧ್ವಿ ಶಿರೋಮಣಿಯಾದ ಮಲ್ಲಮ್ಮನ ಪವಾಡಗಳು, ಸಂಕಷ್ಟಗಳು ಗೊತ್ತಾಗುತ್ತವೆ’ ಎಂದು ಹೇಳಿದರು.

‘ಮಲ್ಲಮ್ಮ ಪುರಾಣದ ವ್ಯಕ್ತಿಯಲ್ಲ. ಚಾರಿತ್ರ್ಯಿಕ ಮಾದರಿ ಮಹಿಳೆಯಾಗಿದ್ದರು. ಅವರ ಸಾತ್ವಿಕ ಗುಣ ಸಹಿಸದ ಅತ್ತೆ, ಓರಗಿತ್ತಿಯರು ಕಷ್ಟಗಳನ್ನು ನೀಡಿದರು. ನಿಂದಕರು, ಕುತಂತ್ರಿಗಳ ಮಧ್ಯೆ ಶಿವಧ್ಯಾನ ಮತ್ತು ಪ್ರಶಾಂತ ಮನಸ್ಸಿನಿಂದ ದುಸ್ಥಿತಿಯನ್ನೇ ಸುಸ್ಥಿತಿಯಾಗಿ ಪರಿಸರ ವನ್ನು ಬದಲಾಯಿಸಿದರು. ಮಲ್ಲಮ್ಮನ ಬದುಕಿನ ಪವಾಡಗಳು ಕನ್ನಡದ ಜನಪದವಾಗಿವೆ’ ಎಂದು ಹೇಳಿದರು.

ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ‘ಸಮಾಜವನ್ನು ಉತ್ತಮ ಹಾದಿಗೆ ತರಲು ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವಕರು ಸದಾಭಿರುಚಿಯ ಚಲನಚಿತ್ರ, ಒಳ್ಳೆಯ ಪುಸ್ತಕ, ದಿನಪತ್ರಿಕೆ ಓದಬೇಕು. ವೈಚಾರಿಕತೆಯ ಬೆಳವಣಿಗೆ ಅದರಿಂದ ಸಾಧ್ಯ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ, ವಿಜ್ಞಾನಿ ತಿಪ್ಪೇಸ್ವಾಮಿ, ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ವಾಮದೇವರು, ಉಪಾಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕಾರ್ಯದರ್ಶಿ ವಿಠ್ಠಲ ಚುಳಕಿ, ಶಿವಲಿಂಗ ಸ್ವಾಮಿ, ಟಿ.ಮಹಾಂತೇಶ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-39-80367208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.