ಮೈಸೂರು: ‘ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಬಲಶಾಲಿಯಾಗಿಸುತ್ತವೆ. ಸಾಮೂಹಿಕ ಪ್ರಾರ್ಥನೆಗಳು ಸನಾತನ ಧರ್ಮ ಉಳಿಸುತ್ತಿವೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಹಿಮಾಲಯ ಪ್ರತಿಷ್ಠಾನ ಹಾಗೂ ಎಸ್ಎಸ್ಜೆಜಿ ಮತ್ತು ನಿಂಬುಜಾದೇವಿ ಅಮ್ಮನವರ ದೇವಸ್ಥಾನ ಟ್ರಸ್ಟ್ನಿಂದ ಇಲ್ಲಿನ ನಜರ್ಬಾದ್ನ ನಿಂಬುಜಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ಶಂಕರಾಚಾರ್ಯ ಜಯಂತಿಯಲ್ಲಿ ಸಾಧಕರಿಗೆ ಶಂಕರಾಚಾರ್ಯ ಸದ್ಭಾವನಾ ಪ್ರಶಸ್ತಿ ವಿತರಿಸಿ ಮಾತನಾಡಿದರು.

‘ಜಯಂತಿಗಳ ಆಚರಣೆ ಮೂಲಕ ಮಹಾಪುರುಷರ ಜೀವನದ ಘಟನೆಗಳನ್ನು ತಿಳಿದುಕೊಳ್ಳಬಹುದು. ಶಂಕರ, ರಾಮಾನುಜಾಚಾರ್ಯ, ಮಧ್ವಾಚಾರ್ಯರಾದಿಯಾಗಿ ಅನೇಕ ಮಹಾಪುರುಷರು ಸಮಾಜವನ್ನು ಪರಿವರ್ತಿಸಲು, ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ್ದಾರೆ. ಅವರ ಸಂದೇಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದರು.

ಜಯಂತಿಗಳಿಂದ ಶಕ್ತಿ: ‘ಈಚೆಗೆ ಹಿಂದೂ ಧರ್ಮ, ಸನಾತನ ಧರ್ಮ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ತಿರುಪತಿ ಲಡ್ಡು ವಿವಾದ, ಶಬರಿಮಲೆ ಪ್ರವೇಶ, ಧರ್ಮಸ್ಥಳ ವಿಷಯಗಳು ಇದಕ್ಕೆ ಉದಾಹರಣೆ. ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡುವವರನ್ನು ಸಾಮೂಹಿಕ ಪ್ರಾರ್ಥನೆ, ಜಯಂತಿಗಳ ಆಚರಣೆಯೂ ಹಿಮ್ಮೆಟ್ಟಿಸುತ್ತಿದೆ’ ಎಂದು ಹೇಳಿದರು.

ಆಡಳಿತ ಸೇವೆ– ಸಿ.ಎನ್.ದಿವಾಕರ್, ಸಾರ್ವಜನಿಕ ಆಡಳಿತ ಸೇವೆ– ಎಂ.ಎಸ್.ರಾಜಶ್ರೀ, ಪತ್ರಿಕಾರಂಗ– ಬಿ. ರಾಘವೇಂದ್ರ, ಸಮಾಜಸೇವೆ– ವಿ,ನಾಗರಾಜು, ಸಂಗೀತ– ಮಧುಸೂದನ ಅವರಿಗೆ ಶಂಕರಾಚಾರ್ಯ ಸದ್ಭಾವನಾ ಪ್ರಶಸ್ತಿ ನೀಡಲಾಯಿತು.

ವಿದ್ವಾಂಸ ಕೆ.ಅನಂತರಾಮು ಅವರು ಶಂಕರಾಚಾರ್ಯ ಫೋಟೊಗೆ ಪುಷ್ಪ ನಮನ ಸಲ್ಲಿಸಿದರು. ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಜನಾರ್ಧನ ಜೆಟ್ಟಿ, ಕಾರ್ಯದರ್ಶಿ ಎಂ.ಕಿರಣ್, ಪ್ರತಿಷ್ಠಾನ ಅಧ್ಯಕ್ಷ ಎಸ್.ಅನಂತ, ಎಸ್.ನಾಗೇಶ್ ಬಾಬು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-39-2082127222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.