ನಾಗಮಂಗಲ: ‘ಸೇವೆ, ಭಕ್ತಿ, ಪೂರ್ಣ ಜ್ಞಾನ ಎಂಬ ಮೂರು ಸಾಧನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯ ಸುಲಭವಾಗಿ ಮುಕ್ತಿ ಸಾಧಿಸಬಹುದು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೆಲಗೆರೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸತ್ಸಂಗ- ಸದ್ವಿಚಾರಗಳ ಸಂಪ್ರೋಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸೇವೆಯಿಂದ ಅಹಂಕಾರ ಅಳಿಯುತ್ತದೆ. ಸೇವೆಯಿಂದ ಆಂಜನೇಯ ಚಿರಂಜೀವಿಯಾದ. ಕೃಷ್ಣ ಕೂಡ ಸೇವೆಯ ಮಹತ್ವ ಅರಿತಿದ್ದ. ಶ್ರೀಕೃಷ್ಣ ಪಾಂಡವರಿಗೆ ಮಾಡಿದ ಅನನ್ಯ ಸೇವೆಯಿಂದ ಸಾವಿರಾರು ವರ್ಷಗಳ ನಂತರವೂ ಪೂಜನೀಯನಾಗಿದ್ದಾನೆ. ಸೇವೆಯ ಮಹತ್ವ ಅಗಾಧವಾದುದು’ ಎಂದರು.

ಮುಕ್ತಿಯ ಎರಡನೇ ಹಾದಿ ಭಕ್ತಿ. ಭಕ್ತಿಯ ಜೊತೆಗೆ ಪೂಜೆ ಜಪ– ತಪ ಸೇರಿದಾಗ ಮನದ ಕಲ್ಮಶಗಳನ್ನು ತೊಳೆದು ಮನುಜನ ಮನಸ್ಸನ್ನು ಹಸನುಗೊಳಿಸುತ್ತದೆ. ಮೂರನೇ ಹಾದಿಯು ಪೂರ್ಣ ಜ್ಞಾನ. ಜ್ಞಾನದ ಸ್ಥಿರತೆ ಇದ್ದರೆ ಮಾತ್ರ ಮುಕ್ತಿ ಸಾಧ್ಯ. ಬುದ್ಧ ಮಹಾವೀರ ವಿವೇಕಾನಂದ ಮುಂತಾದ ಜ್ಞಾನಿಗಳು ಪೂರ್ಣ ಪ್ರಜ್ಞಾವಂತರಾಗಿದ್ದರು. ಹಾಗಾಗಿ ಇಂದಿಗೂ ಮುಂದೆಯೂ ಅವರು ಪ್ರಸ್ತುತ ಎಂದರು. ಕೊನೆಯ ಹಂತದವರೆಗೂ ನಮ್ಮನ್ನು ನಾವು ಸರಿದಾರಿಯಲ್ಲಿ ನಡೆಸಿಕೊಳ್ಳಬೇಕು. ಸೇವೆ ಮಾಡುತ್ತಾ ಅಹಂ ಬರಬಹುದು. ಆಗ ಭಗವಂತನ ಪಾದದಡಿ ನಮ್ಮ ಅಹಮಿಕೆಯನ್ನು ಭಕ್ತಿಯ ಬೆಂಕಿಯಲ್ಲಿ ಸುಟ್ಟುಕೊಂಡಾಗ ಮುಕ್ತಿಯ ಮಾರ್ಗ ಸುಲಲಿತವಾಗುತ್ತದೆ ಎಂದರು.

ಬೆಂಗಳೂರು ಗಾಂಧಿ ಭವನ ನಿರ್ದೇಶಕ ಜಿ.ಬಿ. ಶಿವರಾಜ್, ಕಾಡಶೆಟ್ಟಿಹಳ್ಳಿ ಶ್ರೀನಿವಾಸ್, ಬೆಂಗಳೂರಿನ ಉದ್ಯಮಿ ಪಾಪಣ್ಣ, ಎಚ್.ಟಿ.ಕೃಷ್ಣೇಗೌಡ, ಗುತ್ತಿಗೆದಾರ ವೆಂಕಟೇಶ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಶಾಖಾ ಮಠದ ಕಾರ್ಯದರ್ಶಿ ಸತ್ ಕೀರ್ತಿನಾಥ ಸ್ವಾಮೀಜಿ, ಕುಲಪತಿ ಪ್ರೊ.ಎನ್.ಎಸ್. ಶ್ರೀಧರ್, ಪ್ರಾಂಶುಪಾಲ ಡಾ.ಎಂ.ಜಿ. ಶಿವರಾಮ್ ಇದ್ದರು.

ಎನ್.ಎಸ್.ಎಸ್ ಶಿಬಿರಾಧಿಕಾರಿ ಪ್ರೊ.ಕೆ.ಬಿ. ಮಂಜುನಾಥ್, ಪ್ರೊ.ಬಿ.ಎಚ್. ಕಾವ್ಯಾ, ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-40-879237159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.