ನಾಪೋಕ್ಲು: ಅರಮನೆಪಾಲೆ ಸಮಾಜದ ಮರಣ ಧನ ಸಹಾಯ ನಿಧಿಯ ಮಹಾಸಭೆಯನ್ನು ಮೂರ್ನಾಡುವಿನ ವ್ಯವಸಹಾಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆಸಲಾಯಿತು.

ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕ ಮಂದಣ್ಣ ಪಿ.ಕೆ. ಮಾತನಾಡಿ, ಸಮುದಾಯ ಬಾಂಧವರು ಮರಣ ಹೊಂದಿದ ಸಮಯದಲ್ಲಿ ಸಮುದಾಯದ ಪ್ರತೀ ಸದಸ್ಯರಿಂದ ₹25 ರಂತೆ ಸಂಗ್ರಹಿಸಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ತಲಾ ಹತ್ತು ಸಾವಿರದಂತೆ 2015ರಿಂದ ಇಲ್ಲಿಯವರೆಗೆ ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ₹7.90 ಲಕ್ಷ ವಿತರಿಸಲಾಗಿದೆ. ಇದು ಅರಮನೆಪಾಲೆ ಸಮಾಜದ ಅತ್ಯುನ್ನತ ಸೇವಾ ಕಾರ್ಯ. ಆಪತ್ಕಾಲದಲ್ಲಿ ಸಮುದಾಯ ಬಾಂಧವರನ್ನು ರಕ್ಷಿಸುತ್ತಿದೆ. ಸಮಾಜದ ಅಧೀನದಲ್ಲಿ ಸುಮಾರು 32 ಗ್ರಾಮಗಳಿಗೆ ಸಂಬಂಧಿಸಿ ಒಂಬತ್ತು ಗ್ರಾಮ ಸಮಿತಿಗಳನ್ನು ರಚಿಸಿಕೊಂಡಿದ್ದು, ಪ್ರತೀ ಗ್ರಾಮ ಸಮಿತಿಗಳ ಅಭ್ಯುದಯಕ್ಕಾಗಿ ಸಮಾಜದ ಪರವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಮಾಜ ಬಾಂಧವರನ್ನು ಮುಖ್ಯವಾಹಿನಿಯಲ್ಲಿ ತರುವಲ್ಲಿ ಸತತ ಪ್ರಯತ್ನ ಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ಕಕ್ಕಬ್ಬೆ ಮಾತನಾಡಿ, ಸಮುದಾಯ ಬಾಂಧವರು ಸಮಾಜದ ಎಲ್ಲಾ ಕಾರ್ಯಗಳಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಸಮಾಜದ ಉಪಾಧ್ಯಕ್ಷ ಸುಜುದೇವಯ್ಯ ಬಾಳುಗೋಡು, ಸಮಾಜದ ಕಾರ್ಯದರ್ಶಿಗಳಾದ ದೇವಯ್ಯ ಹಾಕತೂರು, ಸಮಾಜದ ಖಜಾಂಜಿ, ಮಾಜಿ ಯೋಧ ಸುಭಾಷ್ ಬಾಳುಗೋಡು, ಮರಣ ಧನ ಸಹಾಯ ನಿಧಿಯ ಅಧ್ಯಕ್ಷ ಯತೀಶ್ ಬಿದ್ದಪ್ಪ ಬಾಳುಗೋಡು, ಸಮಾಜದ ನಿರ್ದೇಶಕರಾದ ಲೀನಾಶಿವಪ್ಪ ಕಂಡಿಮಕ್ಕಿ,, ದಮಯಂತಿ ಬಿಳಿಗೇರಿ, ಸರಿತ ನಾಗಬಾಣೆ, ರವಿ ಗಣೇಶ್ ಪೇರೂರು ಮತ್ತು ವಿವಿಧ ಗ್ರಾಮ ಸಮಿತಿ ಅಧ್ಯಕ್ಷರು,ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕ್ರಿಕೆಟ್ ಪಂದ್ಯಾಟಗಳ ಸಮಿತಿ ಕಾರ್ಯದರ್ಶಿ ರಘು ಹಾಕತ್ತೂರು, ಮತ್ತು ಸಮಾಜದ ಸದಸ್ಯರು ಭಾಗವಹಿಸಿದ್ದರು.

ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಸಮಾಜದ ವತಿಯಿಂದ ಮರಣ ಧನ ಸಹಾಯ ನಿಧಿಯ ಹಣ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-59836608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.