ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವ ಎರಡು ದಿವಸ ವಿಜೃಂಭಣೆಯಿಂದ ಜರುಗಿತು.

ಉತ್ಸವದ ಅಂಗವಾಗಿ ಗುರುವಾರ ತಕ್ಕರ ಮನೆಯಿಂದ ಭಂಡಾರ ತಂದು ಬಳಿಕ ಮಹಾಪೂಜೆ ತೀರ್ಥ ಪ್ರಸಾದ ವಿತರಿಸಲಾಯಿತು. ಹರಕೆ ರೂಪದಲ್ಲಿ ಭಕ್ತರಿಂದ ವಿವಿಧ ವೇಷಗಳನ್ನು ಧರಿಸಿ ಬೇಡು ಹಬ್ಬ ಜರುಗಿತು. ಕಾರೇರಿಯಂಡ ತಕ್ಕರಲ್ಲಿಂದ ಮೆರವಣಿಗೆಯಲ್ಲಿ ಬಾಳು ಭಂಡಾರವನ್ನು ತರಲಾಯಿತು. ಬಳಿಕ ಆರಾಟ್, ಬೊಳಕಾಟ್ ನಡೆದು ಭಕ್ತರು ತಮ್ಮ ಇಷ್ಟಾರ್ಥ ಸೇವೆಗಳನ್ನು ದೇವರಿಗೆ ಹರಕೆ ಒಪ್ಪಿಸಿದರು

ಉತ್ಸವದಲ್ಲಿ ಭಗವತಿ, ಭದ್ರಕಾಳಿ ಅಮ್ಮನ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಬೇಡು ಹಬ್ಬ, ಪೀಲಿಯಾಟ್ , ಕ್ಷೇತ್ರಪಾಲ, ಸಾರ್ತಾವು, ಭದ್ರಕಾಳಿ ತೆರೆಮುಡಿ, ಮೂರು ದೈವಗಳ ಕೋಲಗಳನ್ನು ಭಕ್ತರು ವೀಕ್ಷಿಸಿ ಸಂಭ್ರಮಿಸಿದರು. ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಡಿಕೇರಿ ಗೋಪಾಲ, ಉಪಾಧ್ಯಕ್ಷ ಚೋಕಿರ ಚೆಂಗಪ್ಪ, ಕಾರ್ಯದರ್ಶಿ ಎಡಿಕೇರಿ ಮಧು, ತಕ್ಕ ಮುಖ್ಯಸ್ಥರಾದ ಎಡಿಕೇರಿ ವಾಸು ಹಾಗೂ ಭಕ್ತರು ಅಧಿಕ ಸಂಖ್ಯೆಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-51-757460142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.