ನರಗುಂದ: ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಪರೋಕ್ಷವಾಗಿ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಅನಿಷ್ಠ ಪದ್ದತಿಗಳಿಗೆ ದೂಡಿ ಕುಟುಂಬಕ್ಕೆ ಮೀಸಲು ಮಾಡುವುದು ಸಲ್ಲದು. ಆದ್ದರಿಂದ ಮಹಿಳೆಯರು ಜಾಗೃತರಾಗಿ ಅನಿಷ್ಠ ಪದ್ದತಿಗಳ ವಿರುದ್ಧ ಹೋರಾಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ ಸಿ ಟ್ರಸ್ಟ್ ಯೋಜನಾಧಿ ಕಾರಿಯಾದ ಮಾಲತಿ ದಿನೇಶ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ ದೊರೆ ಸ್ವಾಮಿ ವಿರಕ್ತಮಠದಲ್ಲಿ 381 ಮಾಸಿಕ ಶಿವಾನುಭವ ಹಾಗೂ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಈಚೆಗೆ ನಡೆದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಸಾಕಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹಿತ ಬಾಲ್ಯವಿವಾಹ ದಿನ ದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ವರ ದಕ್ಷಿಣೆ ಪಿಡುಗು ತೊಲಗುತ್ತಿಲ್ಲ. ದಬ್ಬಾಳಿಕೆ, ಅತ್ಯಾಚಾರದಂತಹ ಘಟನೆಗಳು ನಿತ್ಯ ನಡೆದಿವೆ ಎಂದು ವಿಷಾದಿಸಿದರು.

ಉಮಾವತಿ ನಾಯ್ಕರ ಮಾತನಾ ಡಿದರು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ತೋಂಟದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರಾಜೇಶ್ವರಿ ವೀರನಗೌಡ್ರ, ಎಸ್.ಎಫ್.ದ್ಯಾವನಗೌಡ್ರ, ಮಹಾದೇವಿ ಕುಪ್ಪಸ್ತ, ಡಾ.ವಿಜಯಲಕ್ಷಿ ರಾಯನಗೌಡ್ರ, ಡಾ.ಸುಮಂಗಲಾ ಜಾಧವ, ಆರೋಗ್ಯ ಸುರಕ್ಷಾ ಅಧಿಕಾರಿ ಸುಮಿತ್ರಾ ಜಗಲಿ, ಪ್ರತಿಭಾ ಚಿನಿವಾಲರ ಇದ್ದರು.

ರಡ್ಡೇರನಾಗನೂರಿನ ಬೃಂದಾವನ ಹಾಗೂ ಅಮೃತವರ್ಷಿಣಿ ಮಹಿಳಾ ಭಜನಾ ಮಂಡಳಿಯವರಿಂದ ಅಕ್ಕಮಹಾದೇವಿಯ ವಚನ ಸಂಗೀತ ನೇರವೇರಿತು. ರೇಣುಕಾ ನರಸಾಪೂರ ಸ್ವಾಗತಿಸಿದರು. ಮಹಾಂತೇಶ ಹಿರೇಮಠ ನಿರೂಪಿಸಿದರು. ಶರಣವ್ವ ತೆಗ್ಗಿನಮನಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-23-940531778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.