ಕುದುರೆಗುಂಡಿ (ನರಸಿಂಹರಾಜಪುರ): ‘ಭಾರತ ಇತಿಹಾಸದಲ್ಲಿ ಶಂಕರಾರ್ಚಾಯರು ಧ್ರುವ ನಕ್ಷತ್ರದಂತೆ ಕಂಗೊಳಿಸಿದ್ದಾರೆ. ಸನಾತನ ಧರ್ಮ ಅವನತಿಯಲ್ಲಿದ್ದಾಗ ಧರ್ಮ ಉಳಿಸಲು ಶಂಕರಾಚಾರ್ಯರು ಕಾಲ್ನಡಿಗೆಯಿಂದಲೇ ಸಂಚರಿಸಿ ಧರ್ಮ ಪ್ರಚಾರ ಮಾಡಿದರು.’ ಎಂದು ಕಾನೂರಿನ ಶ್ರೀಗೌರಿ ರಮೇಶ್ ಹೇಳಿದರು.

ತಾಲ್ಲೂಕಿನ ಕುದುರೆಗುಂಡಿಯಲ್ಲಿ ಭಾನುವಾರ ಗಾಯತ್ರಿ ವಿಪ್ರ ಮಹಿಳಾ ಬಳಗ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶಂಕರಾಚಾರ್ಯರು ಕೇವಲ 32 ವರ್ಷ ಮಾತ್ರ ಜೀವಿಸಿದ್ದರು. ಅವರು ತಮ್ಮ ಎರಡನೇ ವಯಸ್ಸಿನಲ್ಲೇ ಮಾತೃ ಭಾಷೆಯಾದ ಮಲಯಾಳಂ ಹಾಗೂ ಸಂಸ್ಕೃತದಲ್ಲಿ ಹಿಡಿತ ಸಾಧಿಸಿದ್ದರು. ವಿಷ್ಣು ಸಹಸ್ರ ನಾಮ, ಭಗವದ್ಗೀತೆಗೆ ಭಾಷ್ಯ ಬರೆದಿದ್ದರು. ಅವರು ರಚಿಸಿದ ಮಹಾ ಕಾವ್ಯ ‘ಸೌಂದರ್ಯ ಲಹರಿ’ಯಲ್ಲಿ ದೇವಿಯ ಸೌಂದರ್ಯದ ವರ್ಣನೆ ಇದೆ. ಪ್ರತಿಯೊಬ್ಬರೂ ಶಂಕರಾಚಾರ್ಯರು ರಚಿಸಿದ ಒಂದು ಸ್ತೋತ್ರವನ್ನಾದರೂ ಓದಬೇಕು ಎಂದರು.

ಗಾಯತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್, ‘ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಮತ್ತು ಅದ್ವೈತ ವೇದಾಂತದ ಪ್ರಚಾರಕ್ಕೆ ಶ್ರಮಿಸಿದ ಶಂಕರಾಚಾರ್ಯರನ್ನು ಸ್ಮರಿಸಲು ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯಂದು ಶಂಕರ ಜಯಂತಿ ಆಚರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗಾಯತ್ರಿ ವಿಪ್ರ ಮಹಿಳಾ ಬಳಗದಿಂದ ವಾರ್ಷಿಕೋತ್ಸವ ಆಚರಿಸಲಾಗುವುದು’ ಎಂದರು.

ಗಾಯತ್ರಿ ವಿಪ್ರ ಮಹಿಳಾ ಬಳಗದ ಸದಸ್ಯೆ ಶಾಂತಿ ಮಾತನಾಡಿ, ಹಿಂದುತ್ವ ಉಳಿಸುವುದು ಹಾಗೂ ಬೆಳೆಸುವ ಉದ್ದೇಶದಿಂದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ 6 ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಸಂತ ಸಮಾಜ ಪರಿಷತ್ ರಚನೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಗಾಯತ್ರಿ ವಿಪ್ರ ಮಹಿಳಾ ಬಳಗದ ಹಿರಿಯ ಸದಸ್ಯೆ ಗೌರಮ್ಮ ಉದ್ಘಾಟಿಸಿದರು. ಶಂಕರಾಚಾರ್ಯರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡಲಾಯಿತು. ಮಹಿಳೆಯರು ಗುರು ವಂದನೆ ಹಾಗೂ ಶಂಕರ ಅಷ್ಟೋತ್ತರ ಪಠಿಸಿದರು. ಸರೋಜಾ ಪ್ರಾರ್ಥಿಸಿದರು. ರೋಹಿಣಿ ಸ್ವಾಗತಿಸಿದರು. ದೀಪಾ ವಂದಿಸಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-126-676654605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.