ನರಸಿಂಹರಾಜಪುರ: ಹೆಣ್ಣು ಮಕ್ಕಳಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ, ತ್ಯಾಗದ ಬಗ್ಗೆ ಹೆಮ್ಮೆಯಿರಬೇಕು. ಪತಿ ಹಾಗೂ ಮಕ್ಕಳ ಬದುಕನ್ನು ಸುಂದರವಾಗಿ ಕಟ್ಟಬೇಕು ಎಂದು ಡಾ.ಅನಸೂಯ ಮಂಜುನಾಥ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 26ನೇ ವರ್ಷದ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಒಂದು ದೇಶ ಪ್ರಗತಿ ಹೊಂದಲು, ಸಂಸ್ಕೃತಿ, ನಾಗರಿಕತೆ ಬೆಳೆಯಲು ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಹಿಳೆಯರಿಗೆ ಯಾವುದೇ ಕೆಲಸವನ್ನು ಕ್ರಿಯಾತ್ಮಕವಾಗಿ ಮಾಡುವ ಶಕ್ತಿಯಿದೆ. ಪತಿಯ ದುಡಿಮೆಯ ಹಣವನ್ನು ಸಮರ್ಪಕ ವೆಚ್ಚ ಮತ್ತು ಉಳಿತಾಯ ಮಾಡುವ ಅರ್ಥಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುವ ವಿಶೇಷ ಶಕ್ತಿ ಮಹಿಳೆಯರಿಗಿದೆ. ಮಹಿಳೆಯರ ಶಕ್ತಿ ಅಗಾಧವಾಗಿದ್ದು ಕುಟುಂಬ, ಸಮಾಜವನ್ನು ಕಟ್ಟಲು ಶಕ್ತಿಯನ್ನು ಸದ್ವಿನಿಯೋಗ ಮಾಡಬೇಕು ಎಂದರು.

ಮಹಿಳೆಯರಿಗೆ ಸನಾತನ ಧರ್ಮದಲ್ಲಿ ವಿಶಿಷ್ಟ ಸ್ಥಾನ ಮಾನ, ಗೌರವ ನೀಡಲಾಗಿದೆ. ಮಕ್ಕಳಿಗೆ ಸನಾತನ ಧರ್ಮದ ವಿಚಾರಗಳನ್ನು ಕಲಿಸಿಕೊಡಬೇಕು. ಹುಟ್ಟಿದ ದೇಶ, ಹೆತ್ತ ತಾಯಿಯನ್ನು ಮರೆಯದೆ ಗೌರವಿಸುವ ಸಂಸ್ಕಾರ ಕಲಿಸಬೇಕು. ಆಧುನಿಕತೆಗೆ ಮಾರು ಹೋಗುತ್ತಿರುವ ಯುವ ಪೀಳಿಗೆ ಪೋಷಕರ ಮಾತು ಕೇಳದೆ ದಾರಿ ತಪ್ಪುತ್ತಿದೆ. ಇದರಿಂದ ವಿಚ್ಛೇದನದ ಸಂಖ್ಯೆ ಹೆಚ್ಚಾಗುತ್ತಿದೆ. ಹಿರಿಯರು ತಮ್ಮ ಅನುಭವದ ಮೇಲೆ ಯುವ ಜನಾಂಗಕ್ಕೆ ಮೌಲ್ಯ, ತತ್ವಗಳನ್ನು ಹೇಳಿಕೊಡುವ ಕೆಲಸ ಮಾಡಬೇಕು ಎಂದರು.

ಮಹಿಳೆಯರು ಸೌಂದರ್ಯಕ್ಕೆ ಕೊಡುವ ಪ್ರಾಮುಖ್ಯತೆ ಆರೋಗ್ಯಕ್ಕೆ ಕೊಡುತ್ತಿಲ್ಲ. ಹೆಣ್ಣುಮಕ್ಕಳು ಆರೋಗ್ಯದ ಕಡೆ ಗಮನಹರಿಸಬೇಕು. ಯೋಗ, ವ್ಯಾಯಾಮ, ಧ್ಯಾನ, ಪ್ರಾರ್ಥನೆಗೆ ಸಮಯ ಮೀಸಲಿಡಬೇಕು ಎಂದರು.

ಪುಷ್ಪಾ ರಾಜೇಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸ್ಥಾಪಕ ಅಧ್ಯಕ್ಷೆ ಶ್ಯಾಮಲಾ ಸತೀಶ್, ವನಮಾಲಮ್ಮ, ಕಾರ್ಯದರ್ಶಿ ಪೂರ್ಣಿಮ ಮಧು, ಖಜಾಂಚಿ ರೇಖಾಮೋಹನ್, ಮಂಗಳ, ಅಶ್ವಿನಿ, ಅನುಷ ಅಶ್ವನ್ ಹಾಜರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ನಾಗಚಂದ್ರ ಪ್ರತಿಷ್ಠಾನದ ಕಣಿವೆ ವಿನಯ್, ಗದ್ದೆಮನೆ ಅಣ್ಣೇಗೌಡ, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ಅಚ್ಚುತ ಹೆಬ್ಬಾರ್, ರಜನಿ ಸತ್ಯನಾರಾಯಣ, ವಾಣಿ ನರೇಂದ್ರ, ಸವಿತಾ ರತ್ನಾಕರ್, ಅಂಕಿತ ಪ್ರಜ್ವಲ್, ಸನ್ಮತಿ ರಕ್ಷಿತ್, ದರ್ಶಿತ್ ಮೀತಾ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-126-1146275228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.